ದೇವಸ್ಥಾನದಲ್ಲಿ ನಾಗರ ಹಾವು ಪ್ರತ್ಯಕ್ಷಃ ಎರಡು ದಿನಗಳಿಂದ ಭಕ್ತರಿಗೆ ದರ್ಶನ.!
ಯಾದಗಿರಿಃ ತಾಲೂಕಿನ ವರ್ಕನಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀಆಂಜನೇಯ ದೇವಸ್ಥಾನದ ಗರ್ಭ ಗುಡಿಯಲ್ಲಿ ಪ್ರತ್ಯಕ್ಷವಾದ ನಾಗರ ಹಾವು ಕಳೆದ ಎರಡು ದಿನಗಳಿಂದ ಬಂದ ಭಕ್ತರಿಗೆ ದರ್ಶನ ನೀಡುತ್ತಿದೆ. ವಿಷಯ ತಿಳಿದ ಭಕ್ತಾಧಿಗಳು ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ಕೆಲವರು ಹಾವನ್ನು ನೋಡಿ ನಮಿಸಿ ತೆರಳುತ್ತಿದ್ದು, ಇನ್ನುಳಿದವರು ಹಾವನ್ನು ಕಂಡು ಮುಸುನಗೆಯಲ್ಲಿ ಹೊರಡುತ್ತಿದ್ದಾರೆ.
ಯಾರೊಬ್ಬರು ಆ ಹಾವುನ್ನು ಹೊರಗಡೆ ಬಿಡುವ ಕೆಲಸ ಮಾಡುತ್ತಿಲ್ಲ. ಅಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಜನ ನೋಡಲು ಸೇರಿದ್ದರಿಂದ ಹಾವು ಹೊರಗಡೆ ಹೋಗಲು ಆಗುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿರುವುದು ಒಂದಡೆಯಾದರೆ, ಇನ್ನೊಂದಡೆ ಭಕ್ತಾಧಿಗಳು ಹಗಲಲ್ಲಿ ಭಕ್ತರು ಜನರು ಸೇರಿರಬಹುದು ಆ ಭಯಕ್ಕೆ ಹಾವು ಹೊರಗಡೆ ಬಂದಿರಲಿಕ್ಕಿಲ್ಲ. ಆದರೆ ರಾತ್ರಿ ಸಮಯದಲ್ಲಿ ಯಾರು ದೇವಸ್ಥಾನದ ಹತ್ತಿರ ಇರುವದಿಲ್ಲ. ಆಗ ಹೊರಗಡೆ ಹೋಗಬಹುದಿತ್ತು ಎಂಬ ಮರು ಪ್ರಶ್ನೆ ಹಾಕುತ್ತಿದ್ದು, ಭಕ್ತಾಧಿಗಳು ಗೊಂದಲಕ್ಕೆ ಮುಳುಗಿದ್ದಾರೆ.
ಹೀಗಾಗಿ ಪ್ರತ್ಯಕ್ಷಗೊಂಡ ನಾಗರ ಹಾವು ತನ್ನ ಪಾಡಿಗೆ ತಾನು ಯಾರ ಕಣ್ಣಿಗೆ ಕಾಣದ ಹಾಗೇ ಯಾವ ದುಷ್ಟ ಮನುಷ್ಯನ ಕೈಗೆ ಸಿಗದೆ, ಯಾವುದೇ ಹಾನಿ ಸಂಭವಿಸದಂತೆ ಪಾರಾದರೆ ಸಾಕು ಅದುವೇ ಪವಾಡ ಅಲ್ವಾ..?