ಯಾದಗಿರಿ: ಹಾವು ಕಚ್ಚಿ ಅಜ್ಜ-ಮೊಮ್ಮಗ ಸಾವು
ಯಾದಗಿರಿ: ಹಾವು ಕಚ್ಚಿ ಅಜ್ಜ-ಮೊಮ್ಮಗ ಸಾವು
ಯಾದಗಿರಿ: ಕಳೆದ ಒಂದು ವಾರದಿಂದ ಎಲ್ಲೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿದೆ. ಪರಿಣಾಮ ಯಾದಗಿರಿ ತಾಲೂಕಿನ ನಂದೆಪಲ್ಲಿ ಗ್ರಾಮದ ನಿಂಗಪ್ಪ(50) ತನ್ನ ಮೊಮ್ಮಗ ಶೇಖರ್ (15) ನನ್ನು ಕರೆದುಕೊಂಡು ಎಂದಿನಂತೆ ಜಮೀನಿಗೆ ತೆರಳಿದ್ದರು. ಸಂಜೆವರೆಗೂ ಬೆವರುಸುರಿಸಿ ಕೃಷಿ ಕಾಯಕ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಆದರೆ, ವಿಷಕಾರಿ ಹಾವಿನ ರೂಪದಲ್ಲಿ ಎದುರಾಗಿದ್ದ ಜವರಾಯ ಇಬ್ಬರ ಪ್ರಾಣ ಪಕ್ಷಿಯನ್ನು ಬಲಿಪಡಿದಿದ್ದಾನೆ.
ನಿನ್ನೆ ಸಂಜೆ ವೇಳೆ ದುರ್ಘಟನೆ ನಡೆದಿದ್ದು ಅಜ್ಜ ನಿಂಗಪ್ಪ ಹಾಗೂ ಮೊಮ್ಮಗ ಶೇಖರ್ ಹಾವು ಕಚ್ಚಿ ಸಾವಿಗೀಡಾಗಿದ್ದಾರೆ. ಒಂದೇ ಕುಟುಂಬದ ಅಜ್ಜ-ಮೊಮ್ಮಗ ದಾರುಣ ಸಾವಿಗೀಡಾದ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ. ನಿತ್ಯ ನೂರಾರು ಜನ ಓಡಾಡುವ ರಸ್ತೆಯಲ್ಲಿ ಹಾವುಗಳು ಸಾಕಷ್ಟು ಸಲ ಪ್ರತ್ಯಕ್ಷ ಆಗಿವೆ. ಆದರೆ, ನಿನ್ನೆ ಮಾತ್ರ ಒಂದೇ ಕುಟುಂಬದ ಇಬ್ಬರನ್ನು ಹಾವು ಬಲಿಪಡೆದದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.