ಶಹಾಪುರಃ ನ್ಯಾಯಾಧೀಶರ ಮನೆಯ ಆವರಣಕ್ಕೆ ಕಾಲಿಟ್ಟ ಆದಿಶೇಷ
ಹಾವು ಸಂರಕ್ಷಕ ಪೋಲಂಪಲ್ಲಿ ಕ್ಷಣಾರ್ಧದಲ್ಲಿ ಅಪಾಯದಿಂದ ಪಾರು
ನ್ಯಾಯಾಧೀಶರ ಮನೆಯ ಆವರಣಕ್ಕೆ ಕಾಲಿಟ್ಟ ಆದಿಶೇಷ
ಹಾವು ಸಂರಕ್ಷಕ ಪೋಲಂಪಲ್ಲಿ ಕ್ಷಣಾರ್ಧದಲ್ಲಿ ಅಪಾಯದಿಂದ ಪಾರು
ಹಾವು ಸಂರಕ್ಷಕನಿಗೆ ಅರಣ್ಯಾಧಿಕಾರಿಯಿಂದ ಸ್ಟಿಕ್ ಗಿಫ್ಟ್
ಮಲ್ಲಿಕಾರ್ಜುನ ಮುದ್ನೂರ
ಶಹಾಪುರಃ ನಗರದ ನ್ಯಾಯಾಲಯ ಮತ್ತು ನ್ಯಾಯಾಧೀಶರ ಮನೆ ಆವರಣದಲ್ಲಿ ಸುಮಾರು 20 ಕ್ಕೂ ಹೆಚ್ಚು ಬಾರಿ ಹಾವುಗಳು ಬಂದಿವೆ. ಹಾವು ಬಂದಾಗಲೆಲ್ಲ ತಾಲೂಕಿನ ಉರಗ ಸಂರಕ್ಷಕ ಮತ್ತು ಪತ್ರಕರ್ತ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಕರೆ ಬರುತ್ತದೆ.
ಸುಮಾರು 20 ಬಾರಿ ನ್ಯಾಯಾಲಯ ವ್ಯಾಪ್ತಿ ಬಂದ ಹಾವುಗಳನ್ನು ಸಂರಕ್ಷಣೆ ಮಾಡಿ ಅವುಗಳನ್ನು ಅಡವಿಗೆ ಬಿಟ್ಟು ಬಂದ ಕೀರ್ತಿ ಇವರಿಗಿದೆ. ಹೀಗೆ ನಗರ ಸೇರಿದಂತೆ ತಾಲೂಕಿನಾದ್ಯಂತ ಸಾವಿರಾರು ಹಾವುಗಳನ್ನು ಇವರು ಸಂರಕ್ಷಣೆ ಮಾಡಿದ್ದಾರೆ.
ಅದರಂತೆ ಸೋಮವಾರ ರಾತ್ರಿ 9 ರ ಸುಮಾರಿಗೆ ನಗರದ ನ್ಯಾಯಾಧೀಶರ ಮನೆ ಆವರಣಕ್ಕೆ ಬಂದ ನಾಗರ ಹಾವೊಂದನ್ನು ಎಂದಿನಂತೆ ಉರಗ ಸಂರಕ್ಷಕ ಅದನ್ನು ಹಿಡಿಯಲು ಹೋಗಿದ್ದಾರೆ. ಆತನಲ್ಲಿದ್ದ ಹಾವು ಹಿಡಿಯುವ ಸ್ಟಿಕ್ ಮುರಿದಿದ್ದ ಪರಿಣಾಮ, ಅವರ ಸ್ನೇಹಿತ ಅರಣ್ಯ ಅಧಿಕಾರಿ ಶ್ರೀಧರ ಯಕ್ಷಿಂತಿ ಅವರಿಗೆ ಕರೆ ಮಾಡಿ ನಿಮ್ಮ ಹತ್ತಿರ ಹಾವು ಹಿಡಿಯುವ ಸ್ಟಿಕ್ ತೆಗೆದುಕೊಂಡು ಬನ್ನಿ ನ್ಯಾಯಾಧೀಶರ ಮನೆಗೆ ಹಾವೊಂದು ನುಗ್ಗಿದೆ. ಅದನ್ನು ಹಿಡಿಯಬೇಕಿದೆ ಎಂದಾಗ ಅವರು ಕೂಡಲೇ ಸ್ಥಳಕ್ಕೆ ಆಗಮಿಸಿದ್ದಾರೆ. ಇಬ್ಬರು ಸೇರಿ ರಾತ್ರಿ ಸಮಯದಲ್ಲಿ ಹಾವೊಂದನ್ನು ಹಿಡಿದಿದ್ದಾರೆ.
ಹಿಡಿಯುವಾಗ ಒಂದು ಕ್ಷಣ ಕೈ ಹಾಕಿನಾಗರ ಹೆಡೆ ಹಿಡಿಯಲು ಹೋದ ಪೋಲಂಪಲ್ಲಿ ಅವರಿಗೆ ಕ್ಷಣಾರ್ಧದಲ್ಲಿ ಹಾವು ಕಚ್ಚುತಿತ್ತು ಕ್ಷಣಾರ್ಧದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ನಂತರ ಮತ್ತೆ ಸ್ಟಿಕ್ ಬಳಸಿ ಹಾವಿನ ಹೆಡೆ ಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಉರಗ ಸಂರಕ್ಷಕ ಮಲ್ಲಯ್ಯ ಪೋಲಂಪಲ್ಲಿ ಅವರು, ಸ್ವತಃ ದುಡ್ಡು ಕೊಟ್ಟು ಸ್ಟಿಕ್ ತರಿಸುತ್ತಿದ್ದರು. ಹಾವು ಹಿಡಿಯುವ ಸ್ಟಿಕ್ ವೊಂದರ ಬೆಲೆ ಅಂದಾಜು 4 ಸಾವಿರ ರೂ. ಇದೆ. ಹೀಗೆ ಹಲವು ವರ್ಷದಿಂದ ಹತ್ತಾರು ಸ್ಟಿಕ್ ಬಳಕೆ ಮಾಡಿದ್ದಾರೆ. ಕಳೆದ ತಿಂಗಳಿಂದ ಅವರ ಸ್ಟಿಕ್ ಮುರಿದ ಪರಿಣಾಮ ಸ್ಟಿಕ್ ತರಿಸಲಾಗದೆ ಸುಮ್ಮನಿದ್ದರು. ಮುಖ್ಯವಾಗಿ ಸೇವೆಯಲ್ಲಿ ಯಾರಿಂದಲೂ ಇದುವರೆಗೆ ನೈಯಾಪೈಸೆ ಪಡೆದವರು ಅವರಲ್ಲ. ಉಚಿತವಾಗಿ ಸೇವಾ ಮನೋಭಾವದಿಂದ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇದನ್ನು ಮನಗಂಡಿದ್ದ ಯಾದಗಿರಿ ಅರಣ್ಯ ಇಲಾಕೆ ಅಧಿಕಾರಿ ಶಹಾಪುರ ನಿವಾಸಿಯೂ ಆದ ಶ್ರೀಧರ ಯಕ್ಷಿಂತಿ ಅವರು ಉರಗ ಸಂರಕ್ಷಕ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಸ್ವತಃ ತಮ್ಮ ದುಡ್ಡಿನಿಂದ ಒಂದು ಸ್ಟಿಕ್ ಗಿಫ್ಟ್ ನೀಡುವ ಮೂಲಕ ಪ್ರೋತ್ಸಾಹಿಸಿದ್ದಾರೆ.
ಸುಮಾರು ಬಾರಿ ನಮ್ಮ ಮನೆಗೆ ಹಾವು ಬಂದಿವೆ. ಬಂದಾಗಲೆಲ್ಲ ಪೋಲಂಪಲ್ಲಿ ಅವರಿಗೆ ಕರೆ ಮಾಡಿ ಕರೆಸುತ್ತೇವೆ. ಅವರು ಸುಲಭವಾಗಿ ಹಿಡಿದೊಯ್ದು ಅದನ್ನು ಅಡವಿ, ಕಾಡಿನಲ್ಲಿ ಬಿಟ್ಟು ಬರುತ್ತಾರೆ. ಅವರ ಸೇವೆ ಕೊಡುಗೆ ಅಪಾರ. ಉರಗ ಸಂರಕ್ಷಣೆ ಉತ್ತಮ ಸೇವೆ. ಮತ್ತು ಜನರಿಗೂ ಇದರಿಂದ ಅಪಾಯದಿಂದ, ಭಯದಿಂದ ಪಾರು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
-ಟಿ.ಪಿ.ಸಿದ್ಧರಾಮ. ನ್ಯಾಯಾಧೀಶರು. ಶಹಾಪುರ.
ಶಹಾಪುರದಲ್ಲಿ ಎಲ್ಲಿಯೇ ಹಾವು ಬರಲಿ ಉರಗ ಸಂರಕ್ಷಕ ಮಲ್ಲಯ್ಯ ಪೋಲಂಪಲ್ಲಿ ಹಾಜರಿರುತ್ತಾರೆ. ಉರಗ ಸಂರಕ್ಷಣೆ ಮಾಡುವದಷ್ಟೆ ಅವರ ಗುರಿ. ಯಾರಿಂದಲೂ ನಯಾಪೈಸೆ ಪಡೆಯದೆ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ದುಡ್ಡಿನಿಂದಲೇ ಹತ್ತಾರು ಸ್ಟಿಕ್ ಗಳನ್ನು ಈಗಾಗಲೇ ಬಳಕೆ ಮಾಡಿದ್ದಾರೆ. ಹೀಗಾಗಿ ನಾನು ಹೊಸದಾಗಿ ತಂದಿದ್ದ ಸ್ಟಿಕ್ ಅವರ ಸೇವೆಗೆ ಉಪಯೋಗವಾಗಲಿ ಎಂದು ಗಿಫ್ಟ್ ನೀಡಿದ್ದೇನೆ.
-ಶ್ರೀಧರ ಯಕ್ಷಿಂತಿ. ಅರಣ್ಯ ಇಲಾಖೆ ಯಾದಗಿರಿ.
————–