ಪ್ರಮುಖ ಸುದ್ದಿ
ಯಾದಗಿರಿ ಎಸ್ಪಿ ಸಾಹೇಬರ ಮನೆಯಲ್ಲಿ ಭುಸ್ ಭುಸ್ ನಾಗ!
ಯಾದಗಿರಿ : ನಗರದ ಚಿತ್ತಾಪುರ ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಅವರ ನಿವಾಸದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಕೆಲ ಕಾಲ ಮನೆ ಮಂದಿಯಲ್ಲಿ ಆತಂಕ ಸೃಷ್ಠಿಸಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿಗಳು ಉರಗ ತಜ್ಞರ ಮೊರೆ ಹೋಗಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಉರಗ ತಜ್ಞ ನಾಗರ ಹಾವನ್ನು ರಕ್ಷಿಸಿದ್ದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಎಸ್ಪಿ ರಿಷಿಕೇಶ ಭಗವಾನ್ ಉರಗ ತಜ್ಞರಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.