ಪ್ರಮುಖ ಸುದ್ದಿಬಸವಭಕ್ತಿ

ದಕ್ಷಿಣ ಭಾರತದ ಮೊದಲ ಸಂತ ಸಗರದ ಸೋಫಿ ಸರ್ಮಸ್ತ್ ಸಾಬ.!

ಡಿ.2ರಂದು ಸೋಫಿ ಸರ್ಮಸ್ತ ಸಾಹೇಬ ದರ್ಗಾ ಉರಸು

ಸಗರ ಹಜರತ್ ಸೋಪಿ ಶರ್ಮಸ್ತ ಸಾಹೇಬ್ ದರ್ಗಾ ಉರುಸ – ಅಸಾದುಲ್ಲಾ ಸರ್ಮಸ್ತ್ 

ಯಾದಗಿರಿ, ಶಹಾಪುರಃ ದಕ್ಷಿಣ ಭಾರತದ ಸಂತ, ಸಗರ ನಾಡಿನ ಶರಣರಾದ ಸಗರದ ಸೋಫಿ ಸರ್ಮಸ್ತ ಸಾಹೇಬರ್ ಜಾತ್ರೆ ಡಿಸೆಂಬರ 2 ರಂದು ತಾಲೂಕಿನ ಸುಕ್ಷೇತ್ರ ಸೋಫಿ ಸರ್ಮಸ್ತ ಸಾಹೇಬ ದರ್ಗಾದಲ್ಲಿ ನಡೆಯಲಿದೆ ಎಂದು ದರ್ಗಾದ ಸಜ್ಜಾದೆ ಅಸದುಲ್ಲಾ ಸರ್ಮಸ್ತ್ ತಿಳಿಸಿದರು.

ತಾಲೂಕಿನ ಸಗರ ಗ್ರಾಮದ ಸೋಫಿ ಸರ್ಮಸ್ತ ದರ್ಗಾ ಜಾತ್ರಾ ಮಹೋತ್ಸವ ಅಂಗವಾಗಿ ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಗಂಧದ ಮೆರವಣಿಗೆ ನಡೆದಯಲಿದ್ದು, ಗ್ರಾಮದ ಮುನವರ ಭಾಷಾ ಚೌಡಿಯಿಂದ ಗಂಧದ ಮೆರವಣಿಗೆ ಆರಂಭವಾಗಲಿದ್ದು, ಬೆಳಗಿನ ಜಾವ ಸೋಫಿ ಸರ್ಮಸ್ತ್ ದರ್ಗಾ ತಲುಪಲಿದೆ.

ಮಾರನೇಯ ದಿನ ಚಿರಾಗ ಅಂದ್ರೆ ದೀಪೋತ್ಸವ ನಡೆಯಲಿದೆ ಮೂರನೇಯ ದಿನ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಹೀಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯ ನಡೆಯುತ್ತವೆ. ಹದಿನೈದು ದಿನಗಳವರೆಗೆ ಜಾತ್ರೆ ನಡೆಯಲಿದೆ. ಸಾವಿರಾರು ಜನ ಭಕ್ತರು ಆಗಮಿಸಲಿದ್ದು, ಸೋಫಿ ಸರ್ಮಸ್ತಸಾಬ ಸಂತರ ದರ್ಶನ ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.

ಪ್ರತಿ ವರ್ಷದಂತೆ ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಾ ಬಂದಿದ್ದೇವೆ. ಅದರಂತೆ ಈ ಬಾರಿಯೂ 8 ಜನರನ್ನು ಸನ್ಮಾನಿಸಿ ಗೌರವಿಸಲಾಗುವದು. ಈ ಕ್ಷೇತ್ರ ಹಿಂದೂ-ಮುಸ್ಲಿಂರ ಭಾವೈಕ್ಯತೆಯ ತಾಣವಾಗಿದ್ದು, ಇಲ್ಲಿ ಎಲ್ಲರೂ ಸಮಾನರು. ಭಕ್ತರಲ್ಲಿ ಯಾವುದೇ ಭಿನ್ನಭಾವ ಇರುವದಿಲ್ಲ. ಹಿಂದೂ-ಮುಸ್ಲಿಂರು ಇಲ್ಲಿಗೆ ಸಾವಿರಾರು ಜನ ಬರುತ್ತಾರೆ.

ತಮ್ಮ ಇಷ್ಟದಂತೆ ಸಂತರನ್ನು ಪೂಜಿಸಿ ದರ್ಶನ ಪಡೆಯುತ್ತಾರೆ. ಧಾರ್ಮಿಕ ಸಭೆಯಲ್ಲಿ ಗಣ್ಯರಾದ ಶಾಸಕ ದರ್ಶನಾಪುರ, ಶಾಸಕಿ ಕನಿಝಾ ಫಾತಿಮಾ, ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ್, ಶಾಸಕ ಡಾ.ಅಜೇಯಸಿಂಗ್, ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಮತ್ತು ಮುಖಂಡ ಲಾಲಹ್ಮದ್ ಶೇಠ, ಹಿರಿಯ ನ್ಯಾಯವಾದಿ ಸಾದತ್ ಹುಸೇನಿ ಸೇರಿದಂತೆ 8 ಜನರಿಗೆ ಸನ್ಮಾನಿಸಿ ಗೌರವಿಸಲಾಗುವದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅತ್ತಾರುಲ್ಲಾ ಸರ್ಮಸ್ತಸಾಬ, ವಜಿರುದ್ದೀನ್ ಸಾಹೇಬ ಸೇರಿದಂತೆ ಇತರರು ಉಪಸ್ಥಿತರಿದ್ದರು.

ದಕ್ಷಿಣ ಭಾರತದ ಮೊದಲ ಸಂತ ಸೋಫಿ ಸರ್ಮಸ್ತ್‍ಸಾಬ

ಹಜರತ್ ಸಂತ ಸೋಫಿ ಸರ್ಮಸ್ತಸಾಬ ಅವರು ದಕ್ಷಿಣ ಭಾರತದ ಮೊದಲ ಸಂತರಾಗಿದ್ದು, ಇರಾಕ್ ಮೂಲಕ ಭಾರತಕ್ಕೆ ಬಂದಿದ್ದಾರೆ ಎಂದು ಕಲಬುರ್ಗಿಯ ಪತ್ರಕರ್ತ ಸಯ್ಯದ್ ಅಜದುಲ್ಲಾ ಸರ್ಮಸ್ತ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡುತ್ತಾ ಸಂತ ಸರ್ಮಸ್ತಸಾಬ ಅವರ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡ ಅವರು, ನಾಗರಿಕ ಸಮಾಜದಲ್ಲಿ ಇಂದು ಜೀವನದ ಮೌಲ್ಯಗಳು ಮಾಯವಾಗಿವೆ. ಜನರಲ್ಲಿ ಭಯ, ಭಕ್ತಿ ದೂರವಾಗುತ್ತಿದೆ. ಸಮಾಜದಲ್ಲಿ ಅಸಮಾನತೆ ತಾಂಡವ ವಾಡುತ್ತಿದೆ. ಸಂತರ ಸೋಫಿಗಳ ಮಾರ್ಗದರ್ಶನ, ಆದರ್ಶಗಳನ್ನು ಜನರು ಮರೆಯುತ್ತಿದ್ದಾರೆ.

ಆಸ್ತಿ ಸಂಪತ್ತು ಗಳಿಕೆಯಡಿ ಜನ ಮಗ್ನರಾಗಿದ್ದು, ತಮ್ಮ ಆರೋಗ್ಯವು ಲೆಕ್ಕಿಸದೆ ಜನ ಶ್ರಮಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸಂತ ಸೋಫಿ ಸರ್ಮಸ್ತರು ಹೇಳಿದ ಹಾಗೇ ಮನುಷ್ಯನಿಗೆ ಎಷ್ಟು ಅಗತ್ಯತೆ ಇದೆ ಅಷ್ಟನ್ನು ಮಾತ್ರ ಗಳಿಸಬೇಕು. ಹೆಚ್ಚಿನದು ನಮ್ಮದಲ್ಲ ಎಂಬುದನ್ನು ಎಲ್ಲರೂ ತಿಳಿದುಕೊಂಡು ನಡೆಯಬೇಕಿದೆ.

ಇದ್ದರಲ್ಲಿಯೇ ತೃಪ್ತಿಪಟ್ಟುಕೊಂಡು ನಾಲ್ಕು ಜನರಿಗೆ ಬೇಕಾಗಿ ಬದುಕುವದು ಜೀವನ. ಇಲ್ಲದ ಆಸೆಗೆ ರೆಕ್ಕೆ ಕಟ್ಟಿಕೊಂಡು ಅದನ್ನು ಈಡೇರಿಸಿಕೊಳ್ಳಲು ಹೋಗಿ ಇಡಿ ಜೀವನ ಆನಂದವನ್ನು ಕಳೆದುಕೊಳ್ಳುವದು ಸರಿಯಲ್ಲ. ಪ್ರಸ್ತುತ ದಿನ ಮಾನಗಳಲ್ಲಿ ಸಂತರ, ಸತ್ಪುರುಷರ, ಸೋಫಿಗಳ ತತ್ವಾದರ್ಶವನ್ನು ಮೈಗೂಡಿಸಿಕೊಂಡು ನಡೆಯಬೇಕಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button