ಪ್ರಮುಖ ಸುದ್ದಿ
ಅದ್ಧೂರಿಯಾಗಿಯೇ ದಸರಾ ಆಚರಣೆ ಮಾಡುತ್ತೇವೆ – ಸಚಿವ ವಿ.ಸೋಮಣ್ಣ
ಮೈಸೂರು : ರಾಜ್ಯದಲ್ಲಿ ಒಂದು ಕಡೆ ನೆರೆ ಪ್ರವಾಹ ಮತ್ತೊಂದು ಕಡೆ ಭೀಕರ ಬರದಿಂದಾಗಿ ಜನರ ಬದುಕು ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ನಾಡಹಬ್ಬ ಮೈಸೂರು ದಸರಾ ಸರಳ ಆಚರಣೆ ಮಾಡಬೇಕೆಂಬ ಮಾತು ಎಲ್ಲೆಡೆ ಕೇಳಿಬಂದಿದೆ. ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಸಹ ಸರಳ ದಸರಾ ಆಚರಣೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ವಿ.ಸೋಮಣ್ಣ ಯಾವುದೇ ಕಾರಣಕ್ಕೂ ಸರಳ ಆಚರಣೆ ಇಲ್ಲ, ಬದಲಾಗಿ ಅದ್ಧೂರಿ ದಸರಾ ಆಚರಿಸುತ್ತೇವೆ. ಆದರೆ, ಕಡಿಮೆ ಖರ್ಚಿನಲ್ಲಿ ದಸರಾ ಮಾಡುತ್ತೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.