ಪ್ರಮುಖ ಸುದ್ದಿ
ಎಐಸಿಸಿ ಮಧ್ಯಂತರ ಅದ್ಯಕ್ಷರಾಗಿ ಸೋನಿಯಾ ಗಾಂಧಿ!
ನವದೆಹಲಿ: ಕಳೆದ ಲೋಕಸಭೆ ಚುನಾವಣೆ ಸೋಲಿನ ಬಳಿಕ ನೈತಿಕ ಹೊಣೆಹೊತ್ತು ರಾಹುಲ್ ಗಾಂಧಿ ಎಐಸಿಸಿ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ತೆರವುಗೊಳಿಸಿದ ಅದ್ಯಕ್ಷ ಸ್ಥಾನಕ್ಕೆ ಕಳೆದ ಎರಡು ತಿಂಗಳಿಂದ ಆಯ್ಕೆ ಕಸರತ್ತು ನಡೆಯುತ್ತಿದೆ. ಇಂದು ದೆಹಲಿಯಲ್ಲಿ ಸಿಡಬ್ಲ್ಯೂಸಿ ಸಭೆ ನಡೆದಿತ್ತು. ಸಭೆಯ ಮದ್ಯೆಯೇ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಎದ್ದು ನಡೆದು ಮುಕ್ತವಾಗಿ ನೂತನ ಎಐಸಿಸಿ ಅದ್ಯಕ್ಷರ ಆಯ್ಕೆ ನಡೆಯಲಿ ಎಂದಿದ್ದರು. ಆದರೆ, ಕೊನೆಗೂ ಸಭೆಯಲ್ಲಿ ನೂತನ ಅದ್ಯಕ್ಷರ ಬಗ್ಗೆ ನಿರ್ಧಾರ ಆಗಿಲ್ಲ. ಆದರೆ, ಎಐಸಿಸಿ ಮಧ್ಯಂತರ ಅದ್ಯಕ್ಷರಾಗಿ ಸೋನಿಯಾಗಾಂಧಿ ಅವರನ್ನೇ ಕಾಂಗ್ರೆಸ್ ನಾಯಕರು ಆಯ್ಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.