ಪ್ರಮುಖ ಸುದ್ದಿ
ಭಾರತ ವಿಭಜಿಸುವ ದುಷ್ಟಶಕ್ತಿ ವಿರುದ್ಧ ಹೋರಾಟ – ಸೋನಿಯಾ ಗಾಂಧಿ ಕಿಡಿ
ನವದೆಹಲಿ : ಬಹುಮತವನ್ನು ರಾಜೀವ್ ಗಾಂದಿ ಅವರು ಭಯ ಸೃಷ್ಟಿಸಲು ಬಳಸಿರಲಿಲ್ಲ ಎಂದು ಹೇಳುವ ಮೂಲಕ ಎಐಸಿಸಿ ಅದ್ಯಕ್ಷೆ ಸೋನಿಯಾ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ರಾಜೀವ್ ಗಾಂಧಿ ಅವರ 75ನೇ ಜಯಂತಿ ಅಂಗವಾಗಿ ಜಾಧವ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತವನ್ನು ವಿಭಜನೆ ಮಾಡಲೆತ್ನಿಸುವ ದುಷ್ಟಶಕ್ತಿಗಳ ವಿರುದ್ಧದ ಹೋರಾಟ ಕಾಂಗ್ರೆಸ್ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ ಎಂದರು. ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗೆ ನಾವೆಲ್ಲಾ ಕಟಿಬದ್ಧರಾಗಿ ನಿಲ್ಲಬೇಕು ಎಂದು ಅವರು ಕರೆ ನೀಡಿದರು.