ಪ್ರಮುಖ ಸುದ್ದಿ

ಸೂಫಿ ಸರಮಸ್ತ್ ಸಾಬ ದರ್ಗಾ ಭವನ ಲೋಕಾರ್ಪಣೆ

ಹಿಂದೂ ಮುಸ್ಲಿಂ ಭಾವೈಕ್ಯತೆಯ ಪವಾಡ ಕ್ಷೇತ್ರ-ಡಾ.ಸುಬೇದಾರ

yadgiri, ಶಹಾಪುರಃ ಐತಿಹಾಸಿಕ ಚರಿತ್ರೆ ಹೊಂದಿದ ಸಗರ ನಾಡಿನ ಪುಣ್ಯ ತಾಣವಾದ ಸೋಫಿಸಾಬ್ ಸರಮಸ್ತಾ ದರ್ಗಾ, ಹಿಂದು ಮುಸ್ಲಿಂರ ಭಾವೈಕ್ಯತಾಣವಾಗಿದೆ. ಇದೊಂದು ಪವಾಡ ಕ್ಷೇತ್ರವಾಗಿದ್ದು, ಲಕ್ಷಾಂತರ ಭಕ್ತರಿದ್ದು, ದೇಶ ವಿದೇಶಗಳಿಂದಲೂ ಜನರು ಈ ಕ್ಷೇತ್ರಕ್ಕೆ ಬರುತ್ತಾರೆ. ಬೇಡಿದ ವರ ನೀಡುವ ಭಕ್ತರ ಪಾಲಿನ ಕಾಮಧೇನುವಾಗಿದೆ ಎಂದು ಖ್ಯಾತ ವೈದ್ಯ ಡಾ.ಚಂದ್ರಶೇಖರ ಸುಬೇದಾರ ತಿಳಿಸಿದರು.

ತಾಲೂಕಿನ ಸಗರ ಗ್ರಾಮದ ಸೋಫಿ ಸರಮಸ್ತ್ ಸಾಬ ದರ್ಗಾ ಆವರಣದಲ್ಲಿ ನಿರ್ಮಿಸಲಾದ ಸುಂದರ ಪ್ರಾಂಗಣ, ಸಾಮೂಹಿಕ ಭವನ ಸೇರಿದಂತೆ ಭಕ್ತರ ಅನಕೂಲಕ್ಕಾಗಿ ನಿರ್ಮಿಸಲಾದ 12 ಸ್ನಾನಗೃಹ ಮತ್ತು ಸಾರ್ವಜನಿಕ ಶೌಚಾಲಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ದರ್ಗಾದಲ್ಲಿ ಯಾವುದೇ ಜಾತಿಭೇದ ಧರ್ಮಭೇದವಿಲ್ಲದೆ ಎಲ್ಲರನ್ನೂ ಸಮನಾಗಿ ಕಾಣಲಾಗುತ್ತದೆ. ಸೋಫಿ ಸರ್ಮಸ್ತ್‍ಸಾಬ ಓರ್ವ ಸಂತನಾಗಿ ಸಗರ ಪ್ರಾಂತ್ಯದ ಸಹಸ್ರಾರು ಜನರ ಪಾಲಿಗೆ ಆರಾಧ್ಯವಾಗಿದ್ದಾರೆ. ಹಿಂದಿನ ಅವರ ಇತಿಹಾಸ ರೋಚಕವಾಗಿ. ಈ ಭಾಗದಲ್ಲಿ ರಾಕ್ಷಸರ ಕಾಟ ಜಾಸ್ತಿಯಾಗಿದ್ದು, ರೈತಾಪಿ ವರ್ಷವಿಡಿ ದುಡಿದ ಸಂಗ್ರಹಿಸಿ ಬೆಳೆಯನ್ನು ರಾಕ್ಷಸರು ಹೊತ್ತೊಯ್ಯುತ್ತಿದ್ದರಂತೆ. ಜನರಿಗೆ ಕಾಟ ನೀಡಿ ಎಲ್ಲಾ ದವಸ ಧಾನ್ಯಾಧಿಗಳನ್ನು ಕಿತ್ತುಕೊಂಡು ಹೋಗುತ್ತಿದ್ದರಂತೆ. ಅಲ್ಲದೆ ರಾಕ್ಷಸರಾದ ಅವರಲ್ಲಿ ಮಾಂತ್ರಿಕ ವಿದ್ಯೆಯಿಂದ ಜನರನ್ನು ಬೆದರಿಸುತ್ತಿದ್ದರಂತೆ. ಹೀಗಾಗಿ ಜನ ರೋಸಿ ಹೋಗಿದ್ದರು, ಎಷ್ಟೋ ಜನ ಮನೆ ಮಠ ಕಳೆದುಕೊಂಡು ಗ್ರಾಮ ತೊರೆಯುತ್ತಿದ್ದರು.

ಆ ವೇಳೆಗೆ ರಾಜ್ಯನ ಆಜ್ಞೆ ಮೇರೆಗೆ ಬಂದಿದ ಸರಮಸ್ತ್ ಸಾಬ ರಾಕ್ಷಸರಿಗೆ ತಿರುಗಿ ಬಿದ್ದು, ತಮ್ಮಲ್ಲಿದ್ದ ಅಪಾರ ದೈವ ಭಕ್ತಿಯಿಂದ ರಾಕ್ಷಸರ ಮಾಂತ್ರಿಕ ಶಕ್ತಿ ನಡೆಯದಂತೆ ಮಾಡಿ ಸಗರ ಗ್ರಾಮದ ಜನರ ರಕ್ಷಣೆ ಮಾಡಿದ್ದಾರೆ. ಅಂದಿನಿಂದ ಸರಮಸ್ತ್ ಸಾಬ ಅವರು ಜನರ ಪಾಲಿನೆ ದೇವರಾಗಿ ಪ್ರತೀತಿಯಲ್ಲಿದ್ದಾರೆ ಎಂಬ ಇತಿಹಾಸದಿಂದ ತಿಳಿದು ಬರುತ್ತದೆ.

ಹೀಗಾಗಿ ಇದು ಐತಿಹಾಸಿಕ ಭಾವೈಕ್ಯತೆಯ ಪವಾಡ ಕ್ಷೇತ್ರವಾಗಿದೆ. 762 ವರ್ಷಗಳ ಪುರಾತನ ಸದೃಶ್ಯತೆಗೆ ಹೆಸರಾದ ಈ ದರ್ಗಾ, ಸಹಸ್ರಾರು ಭಕ್ತರ ಮನದಾಳದಲ್ಲಿ ಮನೆ ಮಾತಾಗಿದೆ ಎಂದರು. ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ, ದರ್ಗಾದ ಹಾಜಿಮುಲ್ಲಾ ಸರಮಸ್ತ್ ಸಜ್ಜಾದೆ ನಸೀನ ಮತ್ತು ಮುಜಾವುದ್ದೀನ್ ಸರಮಸ್ತ್ ಸಜ್ಜಾದೆ ನಸೀನರವರ ಭಕ್ತರ ಮೇಲಿನ ಕಾಳಜಿಗಳಿಂದ ದರ್ಗಾದ ಮೂಲಭೂತ ಸೌಕರ್ಯಗಳಿಗೆ ಮುಂದಾಗಿದ್ದು ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ದರ್ಗಾದ ಪೂಜ್ಯ ಸಜ್ಜಾದೆ ನಸೀನ ಹಾಗೂ ಅಜುಮುದ್ದೀನ್ ಸಜ್ಜಾದೆ ನಸೀನ ಮಾತನಾಡಿ. ದೇವರು ಸರ್ವರಿಗೆ ಒಬ್ಬನೆಯಾಗಿದ್ದಾನೆ. ಆದರೆ ಹಲವಾರು ನಾಮಗಳಿಂದ ಸ್ಮರಣೆ ಮಾಡಲಾಗುತ್ತದೆ. ಎಲ್ಲಾ ಮಹಾದೇವನ ಇಚ್ಚಾನುಸಾರ, ಮಾನವ ಕುಲ ಉದ್ಧಾರ ಮತ್ತು ಪಾವನಕ್ಕಾಗಿ ಅವತರಿಸಿದ್ದಾರೆ.

ಅದರಂತೆ ಕಳೆದ 762 ವರ್ಷಗಳ ಹಿಂದೆ ಸೋಫಿ ಸಂತರು ಸಗರ ನಾಡಿಗೆ ಪಾದಾರ್ಪಣೆ ಮಾಡಿಕೊಂಡು, ಈ ನಾಡಿನ ಹಿರಿಮೆಯನ್ನು ದೇಶದ ಉದ್ದಗಲಕ್ಕೂ ಪಸರಿಸಿದ್ದಾರೆ. ಅವರ ಧಾನ್ಯಗಳಿಂದ ನಾವುಗಳು ಮಾನವ ಜನ್ಮದಿಂದ ಮುಕ್ತರಾಗಬೇಕು. ಜಾತ್ಯಾತೀತ ತತ್ವಗಳನ್ನು ಸರ್ವರು ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಸಜ್ಜಾದೆಯವರು ತಿಳಿಸಿದರು.

ಅರಣ್ಯ ಅಧಿಕಾರಿ ಡಾ.ರಮೇಶ ಮಲ್ಲಾ ಮಾತನಾಡಿ, ಸಗರ ಸೂಫಿ ಸಾಹೇಬರ ದರ್ಗಾದಲ್ಲಿ, ನಾನಾ ಬಗೆಯ ಗಿಡಗಳನ್ನು ನೀಡಿ, ಅಲ್ಲದೆ ಅರಣ್ಯ ಸಿಬ್ಬಂದಿಯವರು ತನುಮನ ದನಗಳಿಂದ ಸಹಕರಿಸಿ, ಸುಂದರ ವಾತವರಣ ನಿರ್ಮಾಣಕ್ಕೆ ನಿಸ್ವಾರ್ತ ಸೇವೆ ಸಮರ್ಪಿಸಿದ್ದಾರೆ.

ಈ ಭಾವೈಕ್ಯತೆಯ ತಾಣದಲ್ಲಿ ಶೈಕ್ಷಣಿಕ ಕ್ರಾಂತಿ ಹಮ್ಮಿಕೊಂಡು, ಮಾನವ ಸಂಕುಲಕ್ಕೆ ಮಾದರಿಯಗಲಿ ಎಂದು ಸಲಹೆ ನೀಡಿದರು. ಮುಖಂಡರಾದ. ದರ್ಬಾನ್ ಮುಸ್ತಫಾ, ಸುದೀಪ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಾಯಬಣ್ಣ ಪುರ್ಲೆ. ಟಿಪ್ಪು ಸುಲ್ತಾನ ಸಂಘದ ಅಧ್ಯಕ್ಷ ಸೈಯದ್ ಖಾದ್ರಿ, ಎಸ್,ಡಿ,ಪಿ,ಐ ಜಿಲ್ಲಾಧ್ಯಕ್ಷ ಸೈಯದ್ ಖಾಲಿದ್ ಸೇರಿದ್ದರು.

ಸಮಾರಂಭದಲ್ಲಿ ಯುವ ಮುಖಂಡರಾದ ವಜೀರಸಾಬ್, ಆರೀಫುದ್ದೀನ್ ಕಾಲಿ ಮುತ್ತು ಭಾಷಾ ಪಟೆಲ್, ತಲತ್ ಚಾಂದ್, ಶಕೀಲ್ ಮುಲ್ಲಾ. ಸದ್ದಾಂ ದಾದುಲ್ಲಾ. ಅಬ್ದುಲ್ ಬಾಷಾ, ಖಾಜಾ ಪಜುದ್ದೀನ್, ಪಾಷಾಸಾಬ್ ಸೇರಿದಂತೆ ನೂರಾರು ಜನ ಗಣ್ಯರು, ದರ್ಗಾದ ಸಕಲ ಭಕ್ತರು, ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button