ಪ್ರಮುಖ ಸುದ್ದಿ
ಅಸ್ಸಾಂನ ದಿಬ್ರುಗಢ ನದಿಯಲ್ಲಿ ಬೆಂಕಿ ಹೊತ್ತಿ ಉರಿಯುತಿದೆ ಅದ್ಹೇಗೆ ಅಂತೀರಾ.?
ಅಸ್ಸಾಂನ ದಿಬ್ರುಗಢ ನದಿಯಲ್ಲಿ ಬೆಂಕಿ ಹೊತ್ತಿ ಉರಿಯುತಿದೆ ಅದ್ಹೇಗೆ ಅಂತೀರಾ.?
ಅಸ್ಸಾಂಃ ರಾಜ್ಯದ ದಿಬ್ರುಗಢದ ನದಿಯೊಂದರ ಮೂಲಕ ಇಂಧನ ಆಯಿಲ್ ಪೈಪ್ ಹಾದು ಹೋಗಿದ್ದು, ಪೈಪ್ ಲೈನ್ ಹೊಡೆದ ಪರಿಣಾಮ ಬ್ಲಾಸ್ಡ್ ಆಗಿ ನದಿಯಲ್ಲಿಯೇ ಆಯಿಲ್ ಸೋರಿಕೆಯಿಂದ ಧಗಧಗ ಬೆಂಕಿ ಹೊತ್ತಿ ಉರಿಯುತ್ತಿದೆ.
ನದಿಗೆ ಅದ್ಹೇಗೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ನೀವು ಉಬ್ಬೇರಿಸಿರಬಹುದು ಅಲ್ವಾ..ನಿಜ ನಿಮ್ಮ ಮಾತು ಆದರೆ ನದಿಯಲ್ಲಿ ಪೈಪ್ ಲೈನ್ ಮೂಲಕ ಇಂಧನ ಆಯಿಲ್ ಪೂರೈಕೆ ಮಾಡಲಾಗುತ್ತಿತ್ತು.
ಪೈಪ್ ಲೈನ್ ನಲ್ಲಿ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಭಾರಿ ಪ್ರಮಾಣದಲ್ಲಿ ನದಿಯಲ್ಲಿ ಬೆಂಕಿ ಉರಿಯುತ್ತಿರುವದು ಜನರಲ್ಲಿ ಆತಂಕ ತರುವಂತಿದೆ.