ಪ್ರಮುಖ ಸುದ್ದಿ
SP ಬಾಲಸುಬ್ರಹ್ಮಣ್ಯಂ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ಗಣ್ಯರು, ಸಂಬಂಧಿಕರ ಆಗಮನ
SP ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ತೀರ ಗಂಭೀರ, ಆಸ್ಪತ್ರೆಗೆ ಗಣ್ಯರು, ಸಂಬಂಧಿಕರ ಆಗಮನ
ವಿವಿ ಡೆಸ್ಕ್ಃ ಗಾನ ಕೋಗಿಲೆ, ಗಾನ ಗಂಧರ್ವ, ಗಾನ ಗಾರುಡಿಗ, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಕ್ಷಣ ಕ್ಷಣಕ್ಮೂ ಕ್ಷೀಣಿಸುತ್ತಿದೆ ಎನ್ನಲಾಗಿದ್ದು, ಈಗಾಗಲೇ ಆಸ್ಪತ್ರೆಗೆ ಗಣ್ಯರು, ಸಂಬಂದಿಕರು ಆಗಮಿಸುತ್ತಿದ್ದಾರೆ.
ಎಸ್.ಪಿ.ಬಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಸುತ್ತ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಚಂದನವನ ಸೇರಿದಂತೆ ಆಂದ್ರ, ತಮಿಳುನಾಡಿನ ಚಿತ್ರರಂಗದ ಗಣ್ಯರು, ಆತ್ಮೀಯರು ಮತ್ತು ಸಂಬಂಧಿಕರು ಎಸ್.ಪಿ.ಬಿ ಚಿಕಿತ್ಸೆ ಪಡೆಯುತ್ತಿರುವ ಚನ್ನೈನ mgm ಆಸ್ಪತ್ರೆದತ್ತ ಮುಖ ಮಾಡಿದ್ದರೆ. ಕೆಲವೇ ನಿಮಿಷಗಳಲ್ಲಿ ಎಸ್.ಪಿ.ಬಿ.ಬಗ್ಗೆ ಆರೋಗ್ಯ ಬುಲೆಟಿನ್ ಮಾಡಲಿದೆ ಎಂದು ಅವರ ಅಭಿಮಾನಿ ವರ್ಗ, ವೈದ್ಯರು ತಿಳಿಸಿದ್ದಾರೆ.




