ಪ್ರಮುಖ ಸುದ್ದಿ
ನಿರ್ಮಾಪಕ ವಿರುದ್ಧ ನಿರ್ಮಾಪಕ ಏನಿದು ಫೈಟ್.?
ಚಿತ್ರ ನಿರ್ಮಾಪಕ ಕೆ.ಮಂಜು ಮೇಲೆ ಎಫ್ಐಆರ್ ದಾಖಲು
ಬೆಂಗಳೂರು; ಚಿತ್ರ ನಿರ್ಮಾಪಕ ಕೆ.ಮಂಜು ಮತ್ತು ರಾಜಗೋಪಾಲ ಎಂಬುವರ ವಿರುದ್ಧ ಇನ್ನೋರ್ವನಿರ್ಮಾಪಕ ಪುಟ್ಟರಾಜು ಎಂಬುವರು ಮಹಾದೇವಪುರ ಪೊಲೀಸ್ ಠಾಣೆಯಲ್ಲಿ ಹಣ ವಂಚಿಸಿರುವ ಕುರಿತು ದೂರು ದಾಖಲಿಸಿದ ಘಟನೆ ಜರುಗಿದೆ.
ಆರೋಪಿಗಳಾದ ನಿರ್ಮಾಪಕ ಕೆ.ಮಂಜು 1.10 ಕೋಟಿ ರೂಪಾಯಿ ಮತ್ತು ಅದೇ ರೀತಿ ರಾಜಗೋಪಾಲ ಎಂಬುವರು 68 ಲಕ್ಷ ರೂ. ಪಡೆದು ವಂಚಿಸಿದ್ದಾರೆ ಎಂದು ನಿರ್ಮಾಪಕ ಪುಟ್ಟರಾಜು ಠಾಣೆಯಲ್ಲಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಹಣ ವಾಪಸ್ ಕೇಳಿದರೆ ಇಬ್ಬರು ಆರೋಪಿಗಳು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಆರೋಪಿಗಳಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420, 506 ಮತ್ತು 34 ರಡಿಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.