ಪ್ರಮುಖ ಸುದ್ದಿ
ನಾಳೆ ಸದನದಲ್ಲಿ ಅಚ್ಚರಿ ಕಾದಿದೆ ಎಂದ ಸ್ಪೀಕರ್ ಮಾತಿನ ಮರ್ಮವೇನು?
ಬೆಂಗಳೂರು : ಇಂದಿನ ಸುದ್ದಿಗೋಷ್ಠಿಯಲ್ಲಿ 14ಜನ ಅತೃಪ್ತ ಶಾಸಕರ ಅನರ್ಹತೆ ತೀರ್ಪು ಪ್ರಕಟಿಸಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್ ನಾಳೆ ಸದನದಲ್ಲಿ ಅಚ್ಚರಿ ಕಾದಿದೆ ಎಂದಿದ್ದಾರೆ. ಆ ಅಚ್ಚರಿ ಏನೆಂಬ ವಿಚಾರ ರಾಜ್ಯದ ಜನರ ತಲೆಯಲ್ಲಿ ಕಂಬಳಿ ಹುಳುವಿನಂತೆ ಗಿರಕಿ ಹೊಡೆಯುತ್ತಿದೆ. ಮತ್ತೊಂದು ಕಡೆ ಮಾಜಿ ಸಿಎಂ ಸಿದ್ಧರಾಮಯ್ಯ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತ ಬಿಜೆಪಿಯವರೇ ನಾಳೆ ಯಡಿಯೂರಪ್ಪ ವಿರುದ್ಧ ಮತ ಹಾಕಬಹುದು ಎಂದಿದ್ದಾರೆ. ಹೀಗಾಗಿ, ಜನ ಈಗಿನ ರಾಜಕೀಯ ಸ್ಥಿತಿಗತಿ ನೆನದು ಫುಲ್ ಕನ್ ಫ್ಯೂಷನ್ ಗೆ ಒಳಗಾಗುವಂತಾಗಿದೆ.
ಆದರೆ, ನಾಳೆ ಸ್ಪೀಕರ್ ರಮೇಶ್ ಕುಮಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆಯೇ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಒಟ್ಟು 17ಜನ ಅತೃಪ್ತ ಶಾಸಕರು ಅನರ್ಹಗೊಂಡಿದ್ದು ವಿಧಾನಸಭೆಯ ಸಂಖ್ಯಾಬಲ 224ರಿಂದ 207ಕ್ಕೆ ಕುಸಿದಿದೆ. ಹೀಗಾಗಿ, 105 ಶಾಸಕರನ್ನು ಹೊಂದಿರುವ ಬಿಜೆಪಿಗೆ ಬಹುಮತದ ಹಾದಿ ಸುಗಮವಾಗಿದೆ. ಬಿಜೆಪಿ ಬಹುಮತ ಸೋಲಬೇಕೆಂದರೆ ‘ಪವಾಡ’ವೇ ನಡೆಯಬೇಕಿದೆ.