ಕ್ರೀಡೆಯ ಮೂಲಕ ಯುವಕರಲ್ಲಿ ಅನುಶಾಸನ ದೇಶಪ್ರೇಮಃಕಾಳಹಸ್ತೇಂದ್ರಶೀ
ಸಾಮೂಹಿಕ ವ್ಯವಸ್ಥೆಯ ಜಾಗೃತಿಃ ಕಾಳಹಸ್ತೇಂದ್ರ ಶ್ರೀ
ಯಾದಗಿರಿಃ ಕ್ರೀಡೆಯ ಮೂಲಕ ಯುವಕರಲ್ಲಿ ಶಾರೀರಿಕ ಸದೃಢತೆ, ಅನುಶಾಸನ, ದೇಶಪ್ರೇಮ ಜ್ಞಾನದ ಜೊತೆಗೆ ಸಾಮೂಹಿಕ ಕಾರ್ಯಮಾಡುವಂಥ ಭಾವನೆಗಳು ಜಾಗೃತವಾಗುತ್ತವೆ ಎಂದು ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಜಿಲ್ಲೆಯ ಶಹಾಪುರ ನಗರದ ಸರಕಾರಿ ಬಾಲಕರ ಪ್ರೌಢ ಶಾಲೆಯ ಆವರಣದಲ್ಲಿ ಶಿವಶೇಖರಪ್ಪಗೌಡ ಶಿರವಾಳ ಫೌಂಡೇಶನ ಟ್ರಸ್ಟ್ ನಿರ್ಮಿಸಿದ ಹೊನಲು ಬೆಳಕಿನ ವಾಲಿಬಾಲ್ ಮೈದಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಶಿವಶೇಖರಪ್ಪಗೌಡ ಶಿರವಾಳ ಫೌಂಡೇಶನ ಟ್ರಸ್ಟನವರು ಈ ಭಾಗದ ಯುವಕರಿಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಲು ಹೊನಲು ಬೆಳಕಿನ ಉತ್ತಮ ಮೈದಾನ ಸಜ್ಜುಗೊಳಿಸಿ ವಾಲಿಬಾಲ ಪಂದ್ಯಾಟ ಆಯೋಜನೆ ಮಾಡಿರುವುದು ಇದೊಂದು ಸ್ತುತ್ಯಾರ್ಹವಾದ ಕಾರ್ಯ ಮಾಡಿದ್ದಾರೆ. ಇಂತಹ ಕ್ರೀಡೆಗಳು ಆಯೋಜಿಸುವದರಿಂದ ಪ್ರತಿಸ್ಪರ್ಧೆ ಸಾಹಸ ಉತ್ಸಾಹ ಹಾಗೂ ಜಾಗೃತಿ ಗುಣಗಳು ವಿಕಾಸವಾಗುತ್ತವೆ ಎಂದರು.
ಕುಂಬಾರ ಹಿರೇಮಠದ ಸೂಗೂರೇಶ್ವರ ಶಿವಾಚಾರ್ಯರು ಮಾತನಾಡಿ, ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಮನಸ್ಸಿಗೆ ದೇಹಕ್ಕೆ ಆಹ್ಲಾದಕರ ಹಿತ ಅನುಭವಕ್ಕೆ ಬರಲಿವೆ. ಇನ್ನೂ ಕೆಲಸವು ಕ್ರೀಡೆಗಳಲ್ಲಿ ಲವಲವಿಕೆಗೆ, ಜೀವನೋತ್ಸಾಹಕ್ಕೆ ಮೇಲ್ಪಂಕ್ತಿಯಾಗಿವೆ. ಶಾರೀರಿಕ ವಿಕಾಸದ ಆಳವಾದ ಸಂಬಂಧ ಆಯುಷ್ಯದೊಂದಿಗಿದೆ ಎಂಬುವದನ್ನು ತಿಳಿದು ಕೊಳ್ಳಬೇಕು ಎಂದರು.
ಫಕೀರೇಶ್ವರ ಮಠದ ಗುರುಪಾದ ಸ್ವಾಮಿಗಳು ಮಾತನಾಡಿದರು. ಗುಂಬಳಾಪುರ ಮಠದ ಸಿದ್ದೇಶ್ವರ ಶಿವಾಚಾರ್ಯರು, ಬಸವಯ್ಯ ಶರಣರು, ಸಿದ್ಧಲಿಂಗೇಶ್ವರ ಬೆಟ್ಟದ ರುದ್ರಪಶುಪತಿಸ್ವಾಮಿಗಳು, ಕೈಲಾಸ ಆಶ್ರಮದ ಶಿವಲಿಂಗಸ್ವಾಮಿಗಳು, ಸಗರದ ಸೈಯದ್ ಶಾ, ಇಲಿಯಾಸ್ ಪಾಶಾಸಾಹೇಬ ಫಾರೂಖಿ ಸಗರ, ತಕದ್ದುಸ್ ಮಾಬು ಸೈಯದ ಶಾ ಮುಕ್ತಾರ ಪಾಷಾ ತವಕ್ಕಲಿ ಅಣಬಿ ರೋಜಾ, ಶಹಾಪುರದ ತಕದ್ದುಸ್ ಮಾಬು ಸೈಯದ್ ಶಾ ಖಾದರ ಬಾಷಾ ಖಾದ್ರಿ, ನಗರಸಭೆ ಅಧ್ಯಕ್ಷೆ ಕಾಂತಮ್ಮ ಹಣಮಂತ್ರಾಯ ಯಕ್ಷಿಂತಿ, ಉಪಾದ್ಯಕ್ಷ ಡಾ.ಬಸವರಾಜ ಇಜೇರಿ, ಟ್ರಸ್ಟ್ನ ಅದ್ಯಕ್ಷ ಶಿವಪುತ್ರಪ್ಪಗೌಡ ಪಾಟೀಲ್, ಕಾರ್ಯದರ್ಶಿ ಅಮಾತೆಪ್ಪ ಕಂದಕೂರ, ಮಲ್ಲಣ್ಣ ಮಡ್ಡಿ ಶಾಸಕ ಗುರು ಪಾಟೀಲ್ ಶಿರವಾಳ, ಮಾಂಗಿಲಾಲ್ ಜೈನ, ಲಾಲ್ ಅಹ್ಮದ ಖುರೇಶಿ, ಅಡಿವೆಪ್ಪ ಜಾಕಾ , ವಸಂತ ಸುರಪುರ , ಸುಧೀರ ಚಿಂಚೋಳಿ, ಮರೆಪ್ಪ ಹಯ್ಯಾಳಕರ್, ದೊಡ್ಡ ಮಾನಯ್ಯ, ಶೇಖ ಲಾಡ್ಲೆ, ಮಲ್ಲಿಕಾರ್ಜುನ ಚೌದ್ರಿ, ರವಿ ಯಕ್ಷಿಂತಿ ಇತರರು ಉಪಸ್ಥಿತರಿದ್ದರು.
ವಾಲಿಬಾಲ್ ಪಂದ್ಯಾವಳಿಯಲ್ಲಿ ಬೀದರ, ಕಲ್ಬುರ್ಗಿ, ಸೋಲಾಪುರ ಸೇರಿದಂತೆ ವಿವಿಧಡೆಯಿಂದ 20 ತಂಡಗಳು ಭಾಗವಹಿಸಿದ್ದವು. ಸಂಜೆ 6 ಗಂಟೆಯಿಂದ ರಾತ್ರಿ 1 ಗಂಟೆಯವರಿಗೂ ಆಟಗಳು ಜರುಗಿದವು. ಸಾವಿರಾರು ಸಂಖ್ಯೆಯಲ್ಲಿ ಯುವಕರು ವಿದ್ಯಾರ್ಥಿಗಳು ವಾಲಿಬಾಲ್ ಪಂದ್ಯಾಟ ವೀಕ್ಷಿಸಿದರು. ಪ್ರಥಮಸ್ಥಾನ ದೋರನಹಳ್ಳಿ ಎಂ.ಸಿ.ಸಿ ತಂಡ ಪಡೆದರೆ, ಸೋಲಾಪುರದ ಪಡುವಣ ತಂಡ ದ್ವಿತೀಯ ಸ್ಥಾನ, ರಾಯಚೂರು ಜಿಲ್ಲೆಯ ಗೊಬ್ಬುರ ತಂಡ ತೃತಿಯ ಬಹುಮಾನ ಪಡೆದುಕೊಂಡವು.