ಪ್ರಮುಖ ಸುದ್ದಿ
BAD NEWS : ರಾಷ್ಟ್ರಮಟ್ಟದ ಕುಸ್ತಿಪಟು ವಿಕಾಸ್ ಗೌಡ (20) ಇನ್ನಿಲ್ಲ!
ದಾವಣಗೆರೆ : ಕುಸ್ತಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಿದ್ದ ಕುಸ್ತಿಪಟು ವಿಕಾಸ್ ಗೌಡ್ ನಗರದ ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೈಸೂರಿನ ಸೀತಾಪುರ ಗ್ರಾಮದ ವಿಕಾಸ್ ಗೌಡ ಕಳೆದ ನಾಲ್ಕು ವರ್ಷಗಳಿಂದ ದಾವಣಗೆರೆಯ ಕ್ರೀಡಾ ನಿಲಯದಲ್ಲಿದ್ದು ತರಬೇತಿ ಪಡೆಯುತ್ತಿದ್ದರು.
ಬೆನ್ನು ಹುರಿಯಿಂದ ಬಳಲುತ್ತಿದ್ದ ವಿಕಾಸ್ ಗೌಡ ನಗರದ ಎಸ್.ಎಸ್. ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಅರಳುವ ಮುನ್ನವೇ ಮೊಗ್ಗು ಕಮರಿದಂತಾದ್ದು ಕ್ರೀಡಾ ಕ್ಷೇತ್ರವೇ ಕಣ್ಣೀರಲ್ಲಿ ನೆನೆಯುವಂತೆ ಮಾಡಿದೆ.