ಯೂತ್ ಐಕಾನ್
#ನೇಗಿಲಯೋಗಿ ಶ್ರೀರಾಮುಲು : ಶಾಸಕ ಶ್ರೀರಾಮುಲು ನೇಗಿಲು ಹಿಡಿದಾಗ….
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಮತಕ್ಷೇತ್ರದ ವಿವಿಧ ಗ್ರಾಮಗಳಿಗೆ ಇಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ಭೇಟಿ ನೀಡಿದರು. ಚಿತ್ರನಾಯಕನಹಳ್ಳಿ, ಕಾಲುವೆಹಳ್ಳಿ, ತಿಪ್ಪಾರೆಡ್ಡಿಹಳ್ಳಿ ಸೇರಿ ವಿವಿಧ ಗ್ರಾಮಕ್ಕೆ ಭೇಟಿ ನೀಡಿದ ಶ್ರೀರಾಮುಲು ರೈತರ ಸಮಸ್ಯೆ ಆಲಿಸಿದರು. ಮಳೆ ಬೆಳೆ ಬಗ್ಗೆ ರೈತರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತರ ಸಮಸ್ಯೆಗಳಿಗೆ ಶೀಘ್ರಗತಿಯಲ್ಲಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ತಿಪ್ಪಾರೆಡ್ಡಿಹಳ್ಳಿ ಸಮೀಪದ ಜಮೀನೊಂದರಲ್ಲಿ ಖುದ್ದಾಗಿ ನೇಗಿಲು ಹೊಡೆದು ಹೊಲ ಹದಗೊಳಿಸುವ ಮೂಲಕ ಶಾಸಕ ಶ್ರೀರಾಮುಲು ರೈತರಿಗೆ ಸಾಥ್ ನೀಡಿದರು. ಸಾಂಕೇತಿಕವಾಗಿ ನೇಗಿಲು ಹೊಡೆಯುವ ಮೂಲಕ ರೈತರ ಸಮಸ್ಯೆಗಳಿಗೆ ಹೆಗಲಿಗೆ ಹೆಗಲಾಗಿ ದುಡಿಯುವ ಸಂದೇಶ ನೀಡಿದ ಶಾಸಕ ಶ್ರೀರಾಮುಲು ಜನರ ಗಮನಸೆಳೆದರು.