ಪ್ರಮುಖ ಸುದ್ದಿ
RSS ಕಾರ್ಯಕರ್ತರು ಪಕ್ಷ ಸಿದ್ಧಾಂತಕ್ಕಾಗಿ ರಕ್ತ ಸುರಿಸಿದ್ದಾರೆ – ಶ್ರೀರಾಮುಲು
ಬಳ್ಳಾರಿ: RSS ಸೇರಿ ವಿವಿಧ ಸಂಘಟನೆ ಕಾರ್ಯಕರ್ತರು ಪಕ್ಷ, ಸಿದ್ಧಾಂತಕ್ಕಾಗಿ ರಕ್ತ ಸುರಿಸಿದ್ದಾರೆ. ಹೀಗಿರುವ ಸಂದರ್ಭದಲ್ಲಿ ನಮಗೆ ಇಂಥದ್ದೇ ಸ್ಥಾನ ಬೇಕು ಎಂದು ಕೇಳಲ್ಲ ಎಂದು ಬಳ್ಳಾರಿಯಲ್ಲಿ ಮೊಳಕಾಲ್ಮೂರು ಬಿಜೆಪಿ ಶಾಸಕ ಶ್ರೀರಾಮುಲು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತಿದೆ. ಆದರೆ, ನಾನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿದ್ದು ಹೈಕಮಾಂಡ್ ನೀಡುವ ಜವಬ್ದಾರಿ ಸ್ವೀಕರಿಸುತ್ತೇನೆ. ಬಿ.ಎಸ್.ಯಡಿಯೂರಪ್ಪ ಸಿಎಂ ಆಗಬೇಕೆಂಬುದು ನನ್ನಾಸೆ, ನಾನು ದೇವರಲ್ಲಿ ಬೇಡಿಕೊಳ್ಳುವುದು ಸಹ ಅದೊಂದೇ ಎಂದು ಶ್ರೀರಾಮುಲು ಹೇಳಿದ್ದಾರೆ.