ಶಹಾಪುರಃ ಗುರುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೇಗಿದೆ ವ್ಯವಸ್ಥೆ ಗೊತ್ತಾ.?
ಪರೀಕ್ಷಾ ಕೋಣೆ ಪ್ರವೇಶಕ್ಕೂ ಮುನ್ನಾ ತಪಾಸಣೆ, ಮಾಸ್ಕ್ ವಿತರಣೆ
ಶಹಾಪುರಃ ಕೊರೊನಾ ಆತಂಕದ ನಡುವೆಯೇ ನಾಳೆ ಆರಂಭಗೊಳ್ಳಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರದಲ್ಲಿ 4551 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಕೋಣೆ ಪ್ರವೇಶಕ್ಕೂ ಮುನ್ನಾ ವಿದ್ಯಾರ್ಥಿಗಳಿಗೆ ಸ್ಕ್ರೀನಿಂಗ್ ಮೂಲಕ ತಪಾಸಣೆ ಮಾಡಲಾಗುವದು, ಅಲ್ಲದೆ ಮಾಸ್ಕ್ ನೀಡಿ ಪ್ರವೇಶಕ್ಕೆ ಅನುಕೂಲ ಕಲ್ಪಿಸಲಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ್ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ಕ್ರೀನಿಂಗ್ ಮಷೀನ್ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು 16 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳು ಸ್ಥಾಪಿಸಲಾಗಿದ್ದು, ನಗರದಲ್ಲಿ 6 ಪರೀಕ್ಷಾ ಕೇಂದ್ರಗಳಿವೆ. ಪ್ರತಿ ಪರೀಕ್ಷಾ ಕೋಣೆಯಲ್ಲಿ ಪ್ರತಿ 6 ಫೀಟ್ ಗೊಬ್ಬರಂತೆ ಒಂದು ಕೋಣೆಯಲ್ಲಿ 18 ಜನ ವಿದ್ಯಾರ್ಥಿಗಳು ಮಾತ್ರ ಕುಳಿತು ಬರೆಯುವ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಸಾಮಾಜಿಕ ಅಂತರ ಮತ್ತು ಮುಖಕ್ಕೆ ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ.
ಹೊರ ರಾಜ್ಯದಿಂದ ಯಾವುದೆ ವಿದ್ಯಾರ್ಥಿಗಳು ಬರುವದಿಲ್ಲ. ಆದರೆ ಹೊರ ಜಿಲ್ಲೆ, ತಾಲೂಕಿನಿಂದ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ 139 ಇದೆ. ಅಲ್ಲದೆ ನಮ್ಮ ಜಿಲ್ಲೆ ಹಾಗು ತಾಲೂಕಿನಿಂದ 94 ಜನ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ಪರೀಕ್ಷೆ ಬರಲು ಹೋಗುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಲ್ಲಿ ಕೆಮ್ಮು, ನೆಗಡಿ, ಜ್ವರ ಕಂಡು ಬಂದಲ್ಲಿ ಪತ್ಯೇಕವಾಗಿ ಪರೀಕ್ಷೆ ಬರೆಯಲು ಆಯಾ ಕೇಂದ್ರಗಳಲ್ಲಿ ಮುಂಜಾಗೃತವಾಗಿ ಎರಡು ಪ್ರತ್ಯೇಕ ಕೋಣೆಗಳ ವ್ಯವಸ್ಥೆ ಮಾಡಲಾಗಿದೆ. ಮತ್ತು ಪ್ರತಿ ಕೋಣೆಗಳಿಗೆ ನಿತ್ಯ ಸ್ಯಾನಿಟೈಸ್ ಮಾಡಲಾಗುವದು.
ಮತ್ತು ಮುಖ್ಯವಾಗಿ ಕಂಟೋನ್ಮೆಂಟ್ ಜೋನ್‍ನಿಂದ ಬರುವ ವಿದ್ಯಾರ್ಥಿಗಳ ಪಟ್ಟಿ ಸಿದ್ಧ ಪಡಿಸಿದ್ದು ಅಂದಾಜು 160 ಜನ ವಿದ್ಯಾರ್ಥಿಗಳು ಇಂತಹ ಕಂಟೋನ್ಮೆಂಟ್ ಜೋನ್ ನಿಂದ ಬರುತ್ತಿದ್ದು, ಇವರಿಗೆಲ್ಲ ಗಂಟಲು ದ್ರಾವಣ ಮತ್ತು ರಕ್ತ ಮಾದರಿ ಟೆಸ್ಟ್ ಮಾಡಲಾಗಿದ್ದು, ಪರೀಕ್ಷೆ ಪೂರ್ವದಲ್ಲಿಯೇ ವರದಿ ತರಿಸಿಕೊಳ್ಳುವ ನಿರ್ಧಾರ ಸರ್ಕಾರ ಕೈಗೊಂಡಿದೆ. ಪಾಸಿಟಿವ್ ವರದಿ ಬಂದಲ್ಲಿ ಸರ್ಕಾರ ಸೂಚಿಸಿದ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದು ವಿವರಿಸಿದರು.
ಪರೀಕ್ಷಾ ಕೇಂದ್ರಗಳಿಗೆ ನೇಮಕ
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಗಮದಿಂದ ಜರುಗಬೇಕೆಂಬ ಉದ್ದೇಶದಿಂದ 16 ಜನ ಮುಖ್ಯ ಅಧೀಕ್ಷಕರು, 16 ಜನ ಸ್ಕ್ವಾಡ್ ಮತ್ತು ಕಾಯ್ದಿರಿಸಿದ 16 ಜನ ಸ್ಕ್ವಾಡ್‍ಗಳು ಸೇರಿದಂತೆ ಪರೀಕಷಾ ಕೋಣೆಗೆ ಎರಡು ಜನ ಮೇಲ್ವಿಚಾರಕರು ಹಾಗೂ ಇಬ್ಬರು ಸ್ಕೌಟ್ಸ್ ಆಂಡ್ ಗೌಡ್ಸ್ ವಿದ್ಯಾರ್ಥಿಗಳು ನೇಮಿಸಲಾಗಿದೆ. ಅಲ್ಲದೆ ಸಿಆರ್‍ಪಿಯನ್ನು ಪರೀಕ್ಷಾ ನೋಡಲ್ ಅಧಿಕಾರಿಗಳಾಗಿ ನಿಯೋಜನೆಗೊಳಿಸಲಗಿದೆ.
ನಿತ್ಯ 92 ಲೀ.ಸ್ಯಾನಿಟೈಸರ್ ಬಳಕೆಗೆ ಸಿದ್ಧತೆ
ಪರೀಕ್ಷಾರ್ಥಿಗಳಿಗೆ ಕೈ ತೊಳೆಯಲು ನಿತ್ಯ 92 ಲೀಟರ್ ಸ್ಯಾನಿಟೈಸರ್ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಕೋಣೆ ಪ್ರವೇಶಕ್ಕೂ ಮುನ್ನಾ ವಿದ್ಯಾರ್ಥಿಗಳು ಪರೀಕ್ಷಾ ಸಿಬ್ಬಂದಿ ಸ್ಯಾನಿಟೈಸರ್ ನಿಂದ ಕೈತೊಳೆದುಕೊಂಡು ಕೋಣೆ ಪ್ರವೇಶಿಸಬೇಕು. ಅಲ್ಲದೆ ದಿನ ಪ್ರತಿ ಕೋಣೆ ಸ್ಯಾನಿಟೈಸ್ ಮಾಡಲು 80 ಲೀಟರ್ ದ್ರಾವಣ ನೀಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಿಭಾಯಿಸಲು ಸ್ಥಳೀಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದ್ದು, ಕೆಲಸ ಕಾರ್ಯಗಳು ಬರದಿಂದ ಸಾಗಿದೆ ಎಂದು ಬಿಇಓ ಅವರು ತಿಳಿಸಿದರು.
ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳಿಗೆ ತೆರಳಲು ಪ್ರತಿ ಕೇಂದ್ರಕ್ಕೆ ತೆರಳಲು 36 ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಪರೀಕ್ಷಾರ್ಥಿಗಳಿಗೆ ಮಾತ್ರ ಅನುಕೂಲ ಕಲ್ಪಿಸಲಾಗಿದೆ. ಪರೀಕ್ಷಾ ಮುಗಿಯುವವರೆಗೂ ಬಸ್ ಆಯಾ ಪರೀಕ್ಷಾ ಕೇಂದ್ರದಲ್ಲಿಯೇ ನಿಲ್ಲಲಿದೆ. ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳನ್ನು ಮತ್ತೆ ಬಸ್ ಮೂಲಕ ಮರಳಿ ಅವರವರ ಸ್ವಗ್ರಾಮಕ್ಕೆ ಬಿಡಲಾಗುತ್ತದೆ. ನಿತ್ಯ ಬಸ್ ಸ್ಯಾನಿಟೈಸ್ ಮಾಡಲಾಗುವದು. ಬಸ್‍ನಲ್ಲಿ ಸಂಚರಿಸುವಾಗ ಸಹ ವಿದ್ಯಾರ್ಥಿಗಳಿಗೆ ಮಾಸ್ಕ್‍ಗಳನ್ನು ನೀಡಲಾಗುವದು. 10 ಸಾವಿರ ಮಾಸ್ಕ್ ಸಂಗ್ರಹಿಸಲಾಗಿದೆ.
-ರುದ್ರಗೌಡ ಪಾಟೀಲ್. ಬಿಇಓ.ಶಹಾಪುರ.