ಪ್ರಮುಖ ಸುದ್ದಿ
ಗುಂಡೂರಾವ್ ಸಿದ್ದು ಛೇಲಾ-ಅನರ್ಹ ಶಾಸಕ ಸೋಮಶೇಖರ ವಾಗ್ದಾಳಿ
ದಿನೇಶ ಸಿದ್ರಾಮಯ್ಯನ ಛೇಲಾ- ಸೋಮಶೇಖರ ವಾಗ್ದಾಳಿ
ಬೆಂಗಳೂರಃ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪರನ್ನು ಸೋಲಿಸಿದ್ದೆ, ಮಾಜಿ ಸ್ಪೀಕರ್ ರಮೇಶಕುಮಾರ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ, ರಮೇಶಕುಮಾರ ವಿರುದ್ಧ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗುಂಡುರಾವ್ ನೋಟಿಸ್ ನೀಡಿದ್ರಾ ಇಲ್ಲ. ಯಾಕಂದ್ರೆ ಸಿದ್ರಾಮಯ್ಯನ ಛೇಲಾ ಅವನು, ಇದು ಸಿದ್ರಾಮಯ್ಯನ ಕಾಂಗ್ರೆಸ್ಸೋ ಏನು ಮೂಲ ಕಾಂಗ್ರೆಸ್ಸೋ ಎಂದು ಗುಂಡುರಾವ್ ವಿರುದ್ಧ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ ವಾಗ್ದಾಳಿ ನಡೆಸಿದ್ದಾರೆ.
ಅದೇ ಬೇರೆಯವರು ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದಾರೆಂದು ನೋಟಿಸ್ ಜಾರಿ ಮಾಡುವ ಈ ಅಯೋಗ್ಯ ಅಧ್ಯಕ್ಷ ಸಿದ್ರಾಮಯ್ಯನ ಬಕೇಟ್ ಎಂದು ಸಹ ಜರಿದರು.
ಅಲ್ಲದೆ ಮುನಿಯಪ್ಪನವರನ್ನು ಸೋಲಿಸಲು ಇವರೇನೇನು ಪ್ಲಾನ್ ಮಾಡಿದ್ದರು ಎಂಬುದು ನನಗೆ ಗೊತ್ತು. ಯಾರು ನಿಖಿಲ್ ಕುಮಾರ ಸ್ವಾಮಿಯನ್ನು ಸೋಲಿಸಿದರೋ ಅವರನ್ನೆ ಪಕ್ಕದಲ್ಲಿ ಕೂಡಿಸಿಕೊಂಡು ಮಾತನಾಡ್ತಾರೆ.
ಇವನು ಮತ್ತು ಕೃಷ್ಣೆಭೈರೆಗೌಡ ಸಿದ್ರಾಮಯ್ಯ ನ ಛೇಲಾಗಳು ಎಂದು ಏಕವಚನದಲ್ಲಿ ಮತ್ತೆ ಛೇಡಿಸಿರುವ ಘಟನೆ ನಡೆದಿದೆ.