ಪ್ರಮುಖ ಸುದ್ದಿ
ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗೆ ‘ಏಕತಾ ಪ್ರತಿಮೆ’ ಆಯ್ಕೆ
ಅಹಮದಾಬಾದ್ : 182 ಮೀಟರ್ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ಬ್ರಿಟನ್ ನ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಂಸ್ಥೆ ಕೊಡಮಾಡುವ ಪ್ರತಿಷ್ಠಿತ ದಿ ಸ್ಟ್ರಕ್ಚರಲ್ ಅವಾರ್ಡ್ಸ್ ಗೆ ಆಯ್ಕೆ ಆಗಿದೆ. ಹಿರಿಯ ಶಿಲ್ಪಿ ರಾಮ ವನಜಿ ಸುತಾರ್ ಅವರು ವಿನ್ಯಾಸಗೊಳಿಸಿದ್ದು ಲಾರ್ಸನ್ ಆಯಂಡ್ ಟ್ರುಬೋ ಸಂಸ್ಥೆ ನಿರ್ಮಿಸಿರುವ ಏಕತಾ ಪ್ರತಿಮೆ ಗಾತ್ರ ಹಾಗೂ ತಾಣ ಪ್ರಭಾವಶಾಲಿ ಆಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ಇನ್ ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್ ಸಂಸ್ಥೆ 52 ವರ್ಷಗಳಿಂದ ವಿಶ್ವದ ಉತ್ತಮ ರಚನೆಗಳಿಗೆ ಪ್ರಶಸ್ತಿ ನೀಡುತ್ತ ಬಂದಿದೆ. ಸ್ಟ್ರಕ್ಚರಲ್ ಎಂಜಿನಿಯರ್ಸ್ ನಿರ್ವಹಿಸುವ ಕಾರ್ಯದ ಕುರಿತು ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮಾರ್ಟಿನ್ ಪೊವೆಲ್ ತಿಳಿಸಿದ್ದಾರೆ.