ಪ್ರಮುಖ ಸುದ್ದಿ
ತಿದ್ದುಪಡಿ ಕೃಷಿ ಮಸೂದೆ ಜಾರಿಗೆ ರೈತರ ವಿರೋಧವಿಲ್ಲ- ಎಸ್.ಟಿ.ಸೋಮಶೇಖರ
ರೈತರಿಂದ ತಿದ್ದುಪಡಿ ಕೃಷಿ ಮಸೂದೆ ಜಾರಿಗೆ ವಿರೋಧವಿಲ್ಲ- ಎಸ್.ಟಿ.ಸೋಮಶೇಖರ
ಬೆಂಗಳೂರಃ ಕೃಷಿ ತಿದ್ದುಪಡಿ ಮಸೂದೆಗಳ ಜಾರಿಗೆ ರೈತರಿಂದ ವಿರೋಧವಿಲ್ಲ. ಕೇವಲ ರೈತ ಮುಖಂಡರಿಂದ ವಿರೋಧವಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಕೃಷಿ ಬಿಲ್ ಪಾಸ್ ಮಾಡಲು ರೈತರು ವಿರೋಧಿಸುತ್ತಿಲ್ಲ. ಬಿಲ್ ರೈತರ ಪರವಾಗಿದೆ. ಹೀಗಾಗಿ ನಾಳೆ ಬಂದ್ ಗೆ ಕರೆ ಕೊಟ್ಟ ರೈತ ಮುಖಂಡರು, ಮತ್ತು ಸಂಘಟನೆಗಳ ಪ್ರಮುಖರು ಮಾತ್ರ ಸೇರುತ್ತಾರೆ. ಅವರ ಜೊತೆಗೆ ರೈತರು ಭಾಗವಹಿಸುವದಿಲ್ಲ ಎಂದು ತಿಳಿಸಿದ್ದಾರೆ.