ಪ್ರಮುಖ ಸುದ್ದಿ
ಅ.21 ರಂದು ಉಪ ಚುನಾವಣೆ ಘೋಷಣೆ
ಅ.21 ರಂದು ಅನರ್ಹ ಶಾಸಕರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ
ವಿವಿ ಡೆಸ್ಕ್ಃ ರಾಜ್ಯದ 16 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಉಪ ಚುನಾವಣೆ ನಡೆಸಲು ಚುನಾವಣೆ ಆಯೋಗ ಘೋಷಣೆ ಮಾಡಿದೆ.
ಅನರ್ಹ ಶಾಸಕ ಪ್ರತಾಪಗೌಡರ ಕ್ಷೇತ್ರ ಮಸ್ಕಿ ಹಾಗೂ ಮುನಿರತ್ನ ಅವರ ಕ್ಷೇತ್ರ ಆರ್ ಆರ್ ನಗರ ಕ್ಷೇತ್ರ ಇವೆರಡನ್ನು ಹೊರತು ಪಡಿಸಿ ಉಳಿದ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿದೆ.
ಆದರೆ ಅನರ್ಹ ಶಾಸಕ ಕುರಿತು ಸುಪ್ರೀಂಕೋರ್ಟ್ ನಲ್ಲಿ ಇನ್ನು ಯಾವುದೇ ಆದೇಶ ಬರದೇ ಇರುವ ಕಾರಣ ಅನರ್ಹರಲ್ಲಿ ಆತಂಕ ಎದುರಾಗಿದೆ ಎನ್ನಲಾಗಿದೆ.
ಬಹುಷ ಆಯೋಗ ಉಪ ಚುನಾವಣೆ ದಿನಾಂಕ ಮತ್ತೇ ಮುಂದೆ ದೂಡಿದರು ಅಚ್ಚರಿ ಪಡುವ ಅಗತ್ಯವಿಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅ.21 ಕ್ಕೆ ಮತದಾನ, ಸೆ. 30 ನಾಮಪತ್ರ ಕೊನೆಯ ದಿನ, ಅ.03 ಕ್ಕೆ ನಾಮಪತ್ರ ವಾಪಸ್, ಅ.24 ಫಲಿತಾಂಶ ಪ್ರಕಟ. ಇದೇ ಸೆ.23 ರಂದು ಅಧಿಕೃತ ಪ್ರಕಟಣೆ ಹೊರ ಬೀಳಲಿದೆ. ಇಂದು ಮದ್ಯಾಹ್ನ 3 ಗಂಟೆಗೆ ರಾಜ್ಯ ಚುನಾವಣೆ ಆಯೋಗದ ಅಧ್ಯಕ್ಷ ಸುದ್ದಿ ಗೋಷ್ಠಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.