2024 ರಲ್ಲೂ ಹಿಂದುತ್ವ ಗೆಲ್ಲಲ್ಲಿದೆ- ಸ್ವಾಮಿ ಭವಿಷ್ಯ
2024 ರಲ್ಲೂ ಹಿಂದುತ್ವ ಗೆಲ್ಲಲ್ಲಿದೆ- ಸುಬ್ರಮಣ್ಯ ಸ್ವಾಮಿ ಭವಿಷ್ಯ
ನವದೆಹಲಿ: 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಹಿಂದುತ್ವ ಗೆಲ್ಲಲಿದೆ ಎಂದು ರಾಜ್ಯಸಭಾ ಸದಸ್ಯ ಸುಬ್ರಮಣ್ಯ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನಡೆಸಿರುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವ ಗೆದ್ದಿದೆ, 2019ರಲ್ಲಿಯೂ ಅದೇ ಗೆದ್ದಿದೆ, 2024ರಲ್ಲಿಯೂ ಮತ್ತೆ ಗೆಲ್ಲಲಿದೆ ಎಂದಿದ್ದಾರೆ.
ಮೋದಿಯವರನ್ನು ಪ್ರಧಾನ ಮಂತ್ರಿಯಾಗಿ ನಾವೆಲ್ಲಾ ಸ್ವೀಕರಿಸಿದ್ದೇವೆ. ಮುಂದೆಯೇ ಸ್ವೀಕರಿಸಲಿದ್ದೇವೆ ಎಂದು ಭವಿಷ್ಯ ನುಡಿದ ಅವರು, ಅದೇ ರೀತಿ, ಅಮೆರಿಕ ಚುನಾವಣೆಯಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ಅವರೇ ಅಧ್ಯಕ್ಷರಾಗುವ ಸಾಧ್ಯತೆ ಇದೆ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕೆಲವೊಂದು ವಿಷಯಗಳಲ್ಲಿ ಸುಬ್ರಮಣ್ಯ ಸ್ವಾಮಿ ಅವರು, ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಕರೊನಾ ವೈರಸ್ನಿಂದ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಪ್ರೋತ್ಸಾಹಕ ಪ್ಯಾಕೇಜ್ ಪರಿಹಾರ ಹಣ ಅಸಮರ್ಪಕವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹೋಗೆ ಹಲವಾರು ವಿಷಯಗಳ ಕುರಿತು ಪರ ವಿರೋಧ ವ್ಯಕ್ತ ಪಡಿಸಿದ್ದಾರೆ.