ಕ್ಯಾಂಪಸ್ ಕಲರವ
ಕೋಟೆನಾಡಿನ ಜನರಿಗೆ ಮತ್ತೊಂದು ಸಂದೇಶ ರವಾನಿಸಿದ ನಟ ಸುದೀಪ್
ಬೆಂಗಳೂರು : ಪ್ರವಾಹ ಮತ್ತು ಹವಾಮಾನ ವೈಪರಿತ್ಯದ ಕಾರಣ ಕೋಟೆನಾಡು ಚಿತ್ರದುರ್ಗದಲ್ಲಿ ನಡೆಯಬೇಕಿದ್ದ ಪೈಲ್ವಾನ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ನಿರ್ಧಾರದಿಂದ ಚಿತ್ರದುರ್ಗ ಮತ್ತು ಆ ಭಾಗದ ಜನರಿಗೆ ನಿರಾಸೆ ಮೂಡಿಸಿದ್ದಕ್ಕೆ ವಿಷಾಧವಿದೆ. ನಿಮ್ಮಷ್ಟೇ ನೋವು ನನಗೂ ಆಗಿದೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ನಮ್ಮ ಮಾತಿಗೆ ಗೌರವ ನೀಡುತ್ತೀರೆಂದು ಭಾವಿಸುತ್ತೇನೆ. ಮುಂದಿನ ಕಾರ್ಯಕ್ರಮವನ್ನು ಖಂಡಿತ ಅಲ್ಲಿಯೇ ಮಾಡುತ್ತೇವೆ ಎಂದು ನಟ ಸುದೀಪ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.