ಪ್ರಮುಖ ಸುದ್ದಿ
ಮಕ್ಕಳಿಬ್ಬರಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಅಪ್ಪ!
ಬೀದರ: ಮಕ್ಕಳಿಬ್ಬರಿಗೆ ವಿಷವುಣಿಸಿ ಕೊಂದು ತಂದೆಯೂ ಆತ್ಮಹತ್ಯೆಗೆ ಶರಣಾದ ಮನಕಲಕುವ ಘಟನೆ ನಗರದ ಬೆತಿನ್ ಕಾಲೋನಿಯಲ್ಲಿ ನಡೆದಿದೆ. ಮೃತರನ್ನು ಗುಪ್ತಚರ ಇಲಾಖೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ವಿನೋದ್ ಕುಮಾರ್ (45), ಮಕ್ಕಳಾದ ಎಡಿಸನ್ (10), ಜಿನಿಫರ್ (08) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಇಂಟಲಿಜೆನ್ಸ್ ಪೊಲೀಸ್ ಆಗಿದ್ದ ವಿನೋದ್ ಕುಮಾರ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಕುಟುಂಬ ಸಮೇತರಾಗಿ ಬೀದರ್ ಗೆ ಬಂದಿದ್ದರು. ಆದರೆ, ಹಬ್ಬಕ್ಕೆ ಬಂದವರು ಆತ್ಮಹತ್ಯೆಗೇಕೆ ಶರಣಾದರು. ಮಕ್ಕಳಿಗೆ ವಿಷವುಣಿಸಲು ಕಾರಣವೇನೆಂಬುದು ತಿಳಿದುಬಂದಿಲ್ಲ. ಮಾರ್ಕೇಟ್ ಪೋಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದ ಆತ್ಮಹತ್ಯೆಯ ಕಾರಣ ತಿಳಿದು ಬರಬೇಕಿದೆ.