ದಿಲ್ಕಿ ದೋಸ್ತಿ
ನಾನು ತಪ್ಪು ಮಾಡಿರುವೆ.! ಕಾರಣ ನೀnu
ನಾನು ನಿಮ್ಮವಳು..ಇಂತಿ ನಿಮ್ಮವಳು..
ನಾನು ಎಂದರೆ ಅರ್ಥವಾಗಿದೆಯೆಂದು ಅಂದು ಕೊಂಡಿದ್ದೇನೆ. ನಾನು ಯಾವತ್ತು ಮಾಡದ ಒಂದು ತಪ್ಪು ಮಾಡಿರುವೆ ಅದಕ್ಕೆ ಕಾರಣ ನೀನೆಂಬ ಕಹಿ ಸತ್ಯ ಮರೆಯದಿರು ಎನ್ನ ಒಡೆಯ.
ಆ ತಪ್ಪನ್ನು ವಿವರಿಸುವ ಅಗತ್ಯವಿಲ್ಲ. ನಿನ್ನನ್ನು ನೋಯಿಸುವ ಯಾವ ಉದ್ದೇಶವು ನನ್ನಲಿಲ್ಲ. ತಾನಾಗಿಯೇ ಆದ ದೊಡ್ಡ ಪ್ರಮಾದವಿದು. ದಯಮಾಡಿ ನಿಮ್ಮಿಂದಾದರೆ.. ಕ್ಷಮಿಸು.
ನಾನು ಇಲ್ಲಿಯವರೆಗೂ ಯಾರನ್ನು ಇಷ್ಟಪಟ್ಟಿಲ್ಲ. ಅವನನ್ನೇನೋ ಇಷ್ಟ ಪಟ್ಟಿದ್ದು ನಿಜ. ಆದರೆ ಯಾವುದು ನೀವಂದು ಕೊಂಡಷ್ಟು ತಪ್ಪಾಗಿಲ್ಲ. ನಿಮ್ಮ ನಂಬಿಕೆಗೆ ಭಂಗ ತಂದಿದ್ದು ನನ್ನ ಅವನ ಪ್ರೀತಿ ನಿಜ.
ಆದರೆ, ಅದರಿಂದ ಯಾರಿಗೂ ಎಲ್ಲಿಯೂ ನೋವಾಗಲೂ ನಾನು ಬಿಡುವದಿಲ್ಲ. ನನ್ನ ಹಣೆಬರಹಕ್ಕೆ ನಾನೇ ಹೊಣೆ. ಇಷ್ಟ ಪಡುವುದು ಇಷ್ಟು ದೊಡ್ಡ ಸಂಕಟಕ್ಕೆ ಗುರಿಯಾಯಿತು.
ನಾನು ಯಾರನ್ನು ನಂಬುವದಿಲ್ಲ. ಯಾರನ್ನು ಇಷ್ಟಪಡಲ್ಲ. ಮಾತು, ಕಾಲ್, ಮೆಸೇಜ್ ಎಲ್ಲ ತೊರೆದು ಇರಬಲ್ಲೆ ನಾನೊಬ್ಬಳೇ..ಗುಡ್ ಬೈ..
-ಸುಮ ಎಂ.ಎಸ್.
ಪತ್ರಿಕೋದ್ಯಮ ವಿದ್ಯಾರ್ಥಿನಿ.