ಕರ್ನಾಟಕ ಇನ್ಮುಂದೆ KSRTC ಹೆಸರು ಬಳಸುವಂತಿಲ್ಲ, ಸುಮಲತಾ ಸಲಹೆ ನೀಡಿದ ಆ ಹೊಸ ಹೆಸರೇನು.?
ಕರ್ನಾಟಕ ಇನ್ಮುಂದೆ KSRTC ಹೆಸರು ಬಳಸುವಂತಿಲ್ಲ, ಸುಮಲತಾ ಸಲಹೆ ನೀಡಿದ ಆ ಹೊಸ ಹೆಸರೇನು.?
ಬೆಂಗಳೂರಃ ಕರ್ನಾಟಕ ಇನ್ಮುಂದೆ ಕೆಎಸ್ಆರ್ಟಿಸಿ ಹೆಸರು ಬಳಸುವಂತಿಲ್ಲ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಂಬ ಹೆಸರನ್ನು ಕಳೆದುಕೊಳ್ಳಲಿದೆ.
ಇದೀಗ ಆ ಹೆಸರು ಕೇರಳ ಪಾಲಾಗಿದೆ. ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಆದೇಶ ಹೊರಡಿಸಿದೆ.
ನಮ್ಮ ರಾಜ್ಯಕ್ಕಿಂತ ಮೊದಲೇ ಕೇರಳ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಎಂದು ಹೆಸರು ಹೊಂದಿರುವ ಹಿನ್ನೆಲೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (KSRTC) ಹೆಸರು ಬದಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಕುರಿತು ನ್ಯಾಯಾಲಯದಲ್ಲಿ ವಾದ ವಿವಾದ ನಡೆದು ಇದೀಗ ಈ ಹೆಸರು ಕೇರಳ ಪಾಲಾಗಿದೆ.
ಹೀಗಾಗಿ ಮಂಡ್ಯ ಸಂಸದೆ ಸುಮಲತಾ ಹೊಸ ಹೆಸರನ್ನೊಂದು ಸಲಹೆ ನೀಡಿದ್ದು, ಸಿಎಂ ಅವರಿಗೆ ಪತ್ರ ಬರೆದಿದ್ದಾರೆ.
ಅವರು ಪತ್ರದಲ್ಲಿ “ಬಾಬಾ ಸಾಹೇಬ” ಸಾರಿಗೆ ಸಂಸ್ಥೆ ಎಂದು ನೂತನ ಹೆಸರಿಡಲು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸ್ಮರಣಾರ್ಥ ಈ ಹೆಸರಿಡಬೇಕೆಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.