ಸುಮಲತಾ ಪರ ಕಾಂಗ್ರೆಸ್-ಬಿಜೆಪಿ ಬಾವುಟ ಬಂಡಾಯ
ಮಂಡ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಧ್ವಜ ಹಿಡಿದು ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಕಾರ್ಯಕರ್ತರು
ಮಂಡ್ಯಃ ಕಾಂಗ್ರೆಸ್ ಕಾರ್ಯಕರ್ತ ರ ವಿರುದ್ಧ ಇಲ್ಲಿನ ಜಿಲ್ಲಾಧ್ಯಕ್ಷ ಹಾಗೂ ಕೆಪಿಸಿಸಿ ರಾಜ್ಯಧ್ಯಕ್ಷ ದಿನೇಶ ಗುಂಡುರಾವ್, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ ಅವರನ್ನು ಬೆಂಬಲಿಸುತ್ತಿರುವ ತಮ್ಮ ಕಾರ್ಯಕರ್ತರಿಗೆ ಖಡಕ್ ವಾರ್ನಿಂಗ್ ನೀಡಿದರು ಯಾವುದೇ ವರ್ಕ್ ಔಟ್ ಆಗ್ತಿಲ್ಲ.
ಇಂದು ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಸಚ್ಚಿದಾನಂದ ಅವರ ಮನೆಯಲ್ಲಿ ಸಭೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಸುಮಲತಾ ಅವರನ್ನು ಬೆಂಬಲಿಸುತ್ತೇವೆ.
ನಮ್ಮಿಂದ ಅಂದ್ರೆ ಕಾರ್ಯಕರ್ತರಿಂದ ನಾಯಕರೇ ವಿನಃ ನಾಯಕರಿಂದ ಕಾರ್ಯಕರ್ತ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಸುಮಲತಾ ಪರ ಪ್ರಚಾರ ಮಾಡುತ್ತಿರುವ ವಿಚಿತ್ರ ಘಟನೆಗಳು ಇಲ್ಲಿ ನಡೆಯುತ್ತೇವೆ.
ಕಾಂಗ್ರೆಸ್ ನಾಯಕರು ನೀವು ಪಕ್ಷ ಬಿಟ್ಟು ಹೋಗಿ ಪಕ್ಷೇತರ ಅಭ್ಯರ್ಥಿಪರ ಪ್ರಚಾರ ಮಾಡುತ್ತಿರುವಿರಿ ಆದರೆ ನಮ್ಮಕಾಂಗ್ರೆಸ್ ಧ್ವಜ ಯಾಕೆ ಬಳಸುತ್ತೀರಿ. ಧ್ವಜ ಬಳಸಿದ್ದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ನ ಘಟಾನುಘಟಿ ನಾಯಕರು ಹೇಳಿಕೆ ನೀಡಿದರೂ ಯಾರೊಬ್ಬರು ಕ್ಯಾರೆ ಅನ್ನದೆ,
ನಾವು ಸ್ವಾಭಿಮಾನದಿಂದ ಸುಮಲತಾ ಅಂಬರೀಶ ಅವರನ್ನು ಬೆಂಬಲಿಸುತ್ತೇವೆ. ನುಮ್ಮ ಯಾವುದೆ ಬೆದರಿಕಗೆ ಹೆದರುವದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತ ರು ಘೋಷಿಸಿದ್ದಾರೆ.
ಅತ್ತ ಬಿಜೆಪಿ ಕಾರ್ಯಕರ್ತ ರು ಬಿಜೆಪಿ ಧ್ವಜ ಹಿಡಿದರೆ, ಕಾಂಗ್ರೆಸ್ ಕಾರ್ಯಕರ್ತ ರು ಸಹ ತಮ್ಮ ಪಕ್ಷದ ಧ್ವಜ ಹಿಡಿದು ಪಕ್ಣೇತರ ಅಭ್ಯರ್ಥಿಯಾದ ಸುಮಲತಾ ಅವರನ್ನು ಬೆಂಬಲಿಸುತ್ತಿರುವದುವ ವಿಚಿತ್ರವಾದರೂ ಸತ್ಯವಿದೆ.
ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಇಲ್ಲಿನ ಕಾರ್ಯಕರ್ತರು, ದಿನೇಶ ಗುಂಡುರಾವ್ ಹಾಗೂ ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಪಕ್ಷಬಿಟ್ಟು ಜೆಡಿಎಸ್ ಗೆ ಓಟು ಹಾಕಿ ಅಂದ್ರೆ ಆಗಲದಲ.
ನಾವು ಸ್ವಾಭಿಮಾನಿ ಸುಮಲತಾ ಅವರನ್ನುಬೆಂಬಲಿಸುತ್ತೇವೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಬಾವುಟ ಹಿಡಿಯುವ ಹಕ್ಕು ನಮಗಿದೆ. ಪಕ್ಷಣ ಬೆಳವಣಿಗೆ ಮತ್ತು ನಾಯಕರನ್ನು ಸೃಷ್ಟಿ ಮಾಡಿರುವದು ನಾವು ಎಂದು ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತ ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.