ಬಹುಜನ ಸಮಾಜ ಪಕ್ಷದಿಂದ ಬೈಕ್ RALLY
ಯಾದಗಿರಿಃ ಜಿಲ್ಲೆಯ ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಇಲ್ಲಿನ ಬಹುಜನ ಸಮಾಜ ಪಕ್ಷ ಪ್ರಜಾಪ್ರಭುತ್ವ ಉಳಿಸುವ ಕಡೆಗೆ ಆನೆಯ ನಡಿಗೆ ಹೆಸರಿನಲ್ಲಿ ಕ್ಷೇತ್ರದಾದ್ಯಂತ ರ್ಯಾಲಿ ನಡೆಸುತ್ತಿದೆ. ಕಳೆದ ವಾರದಿಂದ ಶಹಾಪುರ ವಿಧಾನಸಭೆ ಕ್ಷೇತ್ರದ ಕೆಂಭಾವಿ ಸಮೀಪದ ಗುತ್ತಿಬಸವಣ್ಣ ಗ್ರಾಮದಿಂದ ರ್ಯಾಲಿ ಆರಂಭವಾಗಿದ್ದು, ಪ್ರಸ್ತುತ ಶಹಾಪುರ ಪಟ್ಟಣದಲ್ಲಿ ಬೈಕ್ ರ್ಯಾಲಿ ಮೂಲಕ ಕ್ಷೇತ್ರದಾದ್ಯಂತ ಅಭಿಯಾನ ಮುಂದುವರೆದಿದೆ.
ಈ ಸಂದರ್ಭದಲ್ಲಿ ಮುಖಂಡ ಸಯ್ಯದ್ ಖಾದ್ರಿ ಮಾತನಾಡಿ, ದೇಶದ ಅಭಿವೃದ್ಧಿಗೆ ಬಿಎಸ್‍ಪಿ ಕಂಕಣ ಬದ್ಧವಾಗಿದೆ. ಸರ್ವರಿಗೂ ಸಮಾನ ಹಕ್ಕು, ನಾಗರಿಕರ ಕಲ್ಯಾಣವೇ ಪಕ್ಷದ ಮಂತ್ರವಾಗಿದ್ದು, ಶಹಾಪುರ ಕ್ಷೇತ್ರದ ತೀರಾ ಹಿಂದುಳಿದಿದ್ದು, ನೂತನ ಪಕ್ಷಕ್ಕೆ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಬೇಕಿದೆ. ಸರ್ವ ಸಮುದಾಯವನ್ನು ಸಮಾನರಾಗಿ ಕಾಣುವ, ಜನರ ಹಿತ ಬಯಸಿ ದೇಶದ ಸರ್ವೋತೋಮುಖ, ದೀನ ದಲಿತರ ಉದ್ದಾರಕ್ಕಾಗಿ ಶ್ರಮಿಸುವ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂಧಿಸುವಂತ ಪಕ್ಷಕ್ಕೆ ಮತ ನೀಡಬೇಕಿದೆ.
ದೇಶದಲ್ಲಿ ಎಲ್ಲಾ ಪಕ್ಷದವರನ್ನು ನೋಡಲಾಗಿದೆ. ಪ್ರಸ್ತುತ ಬಿಎಸ್‍ಪಿ ಪಕ್ಷದ ಕಾರ್ಯವೈಕರಿಗಳನ್ನು ಜನ ಗಮನಿಸಿದ್ದು, ಕರ್ನಾಟಕದಲ್ಲಿ ತಳಮಟ್ಟದಿಂದಲೇ ಬಿಎಸ್‍ಪಿ ಬೆಳೆಸಬೇಕಿದೆ. ಇದು ಜನಸಾಮಾನ್ಯರ ಪಕ್ಷವಾಗಿದ್ದು, ಸರ್ವರ ಬೆಂಬಲ ಅಗತ್ಯವೆಂದರು. ನಗರದ ಪ್ರಮುಖ ಬೀದಿಗಳ ಮೂಲಕ ಬಿಎಸ್‍ಪಿ ಮುಖಂಡರು ಕಾರ್ಯಕರ್ತರ ಬೈಕ್ ರ್ಯಾಲಿ ಜರುಗಿತು.
ನಗರದ ಸಿಬಿ ಕಮಾನದಿಂದ ದಿಗ್ಗಿಬೇಸ್, ಆಸರ್ ಮೊಹಲ್ಲಾ ಕನ್ಯಾಕೋಳೂರ ಅಗಿಸಿ ಬಸವೇಶ್ವರ ಸರ್ಕಲ್ ಮೂಲಕ ಮುಂದೆ ತೆರಳಿತು. ಈ ಸಂದರ್ಭದಲ್ಲಿ ಬಿಎಸ್‍ಪಿ ಮುಖಂಡರಾದ ಸಯ್ಯದ್ ಖಾದ್ರಿ, ಅಜಯ್ ಯಳಸಂಗಿಕರ್. ಮಹ್ಮದ್ ಇಮ್ರಾನ್ ಸೇರಿದಂತೆ ಕಾರ್ಯಕಕರ್ತರು ಭಾಗವಹಿಸಿದ್ದರು.
Thanks for your news jai BSP party