ಸಿಸಿಬಿ ಪೊಲೀಸ್ ವಶದಲ್ಲಿರುವ ರವಿ ಬೆಳಗೆರೆ ಸುನೀಲ್ ಹೆಗ್ಗರವಳ್ಳಿಗೆ ಕಾಲ್ ಮಾಡಿದ್ರಂತೆ!
ಬೆಂಗಳೂರು: ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಹಾಗೂ ಅಕ್ರಮ ಶಸ್ತ್ರಾಸ್ತ್ರ ಆರೋಪದ ಮೇಲೆ ಹಾಯ್ ಬೆಂಗಳೂರ್ ಪತ್ರಿಕೆ ಸಂಪಾದಕ ರವಿ ಬೆಳಗೆರೆ ಬಂಧನದಲ್ಲಿದ್ದಾರೆ. ಸದ್ಯ ಸಿಸಿಬಿ ಪೊಲೀಸ್ ಕಸ್ಟಡಿಯಲ್ಲಿರುವ ರವಿ ಬೆಳಗೆರೆ ಅಲ್ಲಿಂದಲೇ ಸುನೀಲ್ ಹೆಗ್ಗರವಳ್ಳಿಗೆ ಕರೆ ಮಾಡಿದ್ದರಂತೆ.
ಹಲೋ ಹಲೋ.. ಅಂದಾಕ್ಷಣ ‘ಏಯ್ ಕೇಳಿಸಿಕೊಳ್ಳೋ… ನನ್ನ ಪತ್ನಿಯ ಜೊತೆ ಸಂಬಂಧವಿತ್ತು ಅಂತ ಟೀವಿಗಳ ಮುಂದೆ ಹೇಳಿದ್ದೀಯಾ’ ಅಂತ ಕೇಳಿದರಂತೆ.’ ನನಗೆಲ್ಲಿತ್ತು ಸಂಬಂಧ, ನಾನ್ಯಾಕೆ ಹೇಳಲಿ’ ಎಂದು ಸುನೀಲ್ ಹೇಳಿದರಂತೆ ಆಗ ಫೋನ್ ಕಟ್ ಆಯಿತು ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಆರೋಪಿಸಿದ್ದಾರೆ.
ಸಿಸಿಬಿ ವಶದಲ್ಲಿರುವಾಗಲೇ ನನಗೆ ಕಾಲ್ ಮಾಡಿ ಬೇರೆ ರೀತಿಯಲ್ಲಿ ಬೆದರಿಕೆ ಒಡ್ಡುತ್ತಿದ್ದಾರೆ. ಇನ್ನು ಜಾಮೀನು ಪಡೆದು ಹೊರ ಬಂದರೆ ನನ್ನನ್ನು ಸುಮ್ಮನೆ ಬಿಡುತ್ತಾರೆಯೇ ಎಂದು ಪ್ರಶ್ನಿಸಿರುವ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಇಂದು ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ. ರಕ್ಷಣೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.