ಯಾದಗಿರಿಃ ಸಿಡಿಲಿಗೆ ಓರ್ವ ಬಾಲಕ ಬಲಿ “ಮುಂದುವರೆದ ಸಾವಿನ ಸಿಡಿಲು”
ಶಹಾಪುರಃ ಸಿಡಿಲಿಗೆ ಓರ್ವ ಬಾಲಕ ಬಲಿ
ಶಹಾಪುರಃ ತಾಲೂಕಿನ ಗುಂಡಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜಮೀನಿನ ಗುಡಿಸಲಲ್ಲಿ ಮಲಗಿರುವ ವಿಶ್ವನಾಥ ತಂದೆ ಬಸವರಾಜ ಕುಂಬಾರ (19) ಎಂಬಾತನಿಗೆ ರಾತ್ರಿ 11:30 ರ ಸಮಯಕ್ಕೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ವಿಶ್ವನಾಥ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿದ್ದು, ಕೆಲಸದ ನಿಮಿತ್ತ ಶುಕ್ರವಾರ ತೋಟಕ್ಕೆ ತೆರಳಿದ್ದಾನೆ. ಎಂದಿನಂತೆ ಸಂಜೆ ಮನೆಗೆ ತೆರಳುವ ಸಂದರ್ಭದಲ್ಲಿ ಧಾರಕಾರ ಮಳೆ, ಗುಡುಗು ಮಿಂಚು ಆರಂಭವಾಗಿದ್ದು, ಮಳೆಯಲ್ಲಿ ಹೋಗಲು ಆಗದ ಪರಿಣಾಮ ಸಮೀಪದ ಗುಡಿಸಿಲಲ್ಲಿ ತಂಗಿದ್ದಾನೆ. ಮಳೆ ಗುಡುಗು ಕಡಿಮೆಯಾದ ತಕ್ಷಣ ಮನೆಗೆ ತೆರಳಲು ನಿರ್ಧರಿಸಿದ್ದಾನೆ. ಆದರೆ, ಆತನಿಗೆ ಸಿಡಿಲು ಎಂಬ ಸಾವು ತಟ್ಟೇ ಬಿಟ್ಟಿದೆ. ಸಿಡಿಲಿನ ಹೊಡೆತಕ್ಕೆ ರಾತ್ರಿ 11 ಗಂಟೆ ಸುಮಾರಿಗೆ ಆತ ಗುಡಿಸಲಿನಲ್ಲಿಯೇ ಸಾವನ್ನಪ್ಪಿದ್ದಾನೆ.
ವಿಷಯ ತಿಳಿದಾಕ್ಷಣ ವಿಶ್ವನಾಥ್ ಮನೆಯಲ್ಲಿ ಪೋಷಕರ ರೋದನೆ ಮುಗಿಲು ಮುಟ್ಟಿತ್ತು. ”ಸಂಜೆ ಜಲ್ದಿ ಮನೆಗೆ ಬಾ ಎಂದು ಹೇಳಿ ಕಳುಹಸಿದ್ದರೂ ಯಾಕೇ ತಡ ಮಾಡಿದೆಪಾ” ಎಂದು ಹೇಳುತ್ತಾ ದುಖ:ದಲ್ಲಿ ಮಹಿಳೆಯರು ಅಳುತ್ತಿದ್ದುದು ನೆರೆದಿದ್ದವರೆಲ್ಲರೂ ಕಣ್ಣೀರು ಹಾಕುವಂತೆ ಮಾಡಿತು.
ಕಳೆದ ಹದಿನೈದು ದಿನಗಳಲ್ಲಿ ಜಿಲ್ಲೆಯಲ್ಲಿ ಸುಮಾರು ಎಂಟು ಜನ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಶುಕ್ರವಾರ ರಾತ್ರಿ ವೇಳೆ ಗುಂಡಾಪುರದಲ್ಲಿ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ ಬಗ್ಗೆ ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.