ಪ್ರಮುಖ ಸುದ್ದಿ

ಯಾದಗಿರಿಃ ಕಾರ್ಯಕ್ರಮದಲ್ಲಿ ಆಹಾರ ಸೇವನೆ 50 ಜನ ಅಸ್ವಸ್ಥ

ಯಾದಗಿರಿ: ಜಾವಳ ಕಾರ್ಯಕ್ರಮವೊಂದರಲ್ಲಿ ಭಾವಹಿಸಿದ್ದ ಜನರು ಆಹಾರ ಸೇವಿಸಿ 50 ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಬೆಂಚಿಗಡ್ಡಿ ಗ್ರಾಮದ ಗವಿರಂಗ ಹನುಮಾನ ದೇವಸ್ಥಾನದಲ್ಲಿ ನಡೆದಿದೆ.

ಬೆಂಚಿಗಡ್ಡಿ ಗ್ರಾಮದ ಗವಿಯಪ್ಪ ಎಂಬುವರು ತಮ್ಮ ಪುತ್ರನ ಜಾವಳ ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಯಕ್ರಮದ ಸಲುವಾಗಿ ಹೋಳಿಗೆ, ಅನ್ನ, ಸಾಂಬರ್ ಸೇರಿದಂತೆ ಇತರೆ ಪದಾರ್ಥಗಳನ್ನು ಊಟಕ್ಕಾಗಿ ತಯಾರಿಸಲಾಗಿತ್ತು.

ಕಾರ್ಯಕ್ರಮದ ನಂತರ‌ ಆಗಮಿಸಿದ್ದ ಜನರಿಗೆ ಊಟ ಬಡಿಸಲಾಗಿದ್ದು, ಊಟದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದ್ದು ಗಾಬರಿಗೊಂಡ ಸ್ಥಳೀಯರು ಊಟವನ್ನು ಅರ್ಧಕ್ಕೆ ಬಿಟ್ಟು, ಅಸ್ವಸ್ಥಗೊಂಡವರನ್ನು ಸಮೀಪದ ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.

ಸದ್ಯ ವೈದ್ಯರು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಜನರು ಊಟದ ನಂತರ ಅಸ್ವಸ್ಥತೆ ಗೊಂಡಿರಲು ಕಾರಣವೇನು ಬಹಿರಂಗ ಪಡಿಸಿರುವದಿಲ್ಲ.

ಆಹಾರದಲ್ಲಿ ವಿಷಪ್ರಾಶಣ ಯಾರಾದ್ರೂ ಹಾಕಿದ್ರಾ ಅಥವಾ ಆಹಾರ ತಯಾರಿಕೆಯಲ್ಲಿ ಅಲ್ಲಿ, ಕ್ರಿಮಿಕೀಟಗಳೇನಾದ್ರೂ ಇದ್ವಾ ಯಾವುದೇ ಸ್ಪಷ್ಟನೆ ಇದುವರೆಗೂ ವೈದ್ಯರಿಂದ ಸ್ಪಷ್ಟತೆ ಬಂದಿರುವದಿಲ್ಲ.

Related Articles

Leave a Reply

Your email address will not be published. Required fields are marked *

Back to top button