ಪ್ರಮುಖ ಸುದ್ದಿವಿನಯ ವಿಶೇಷ
ಯಾದಗಿರಿಯಲ್ಲಿ ಆಂಜನೇಯ ಸ್ವಾಮಿಗೆ ಗ್ರಹಣದ ಬಿಸಿ
ಯಾದಗಿರಿಯಲ್ಲಿ ಆಂಜನೇಯ ಸ್ವಾಮಿಗೆ ಗ್ರಹಣ
ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಗ್ರಹಣ ನಿಮಿತ್ಯ ಬೀಗ ಹಾಕಲಾಗಿದೆ.
ಗ್ರಹಣದ ನಂತರ ಗುಡಿ ಶುದ್ಧೀಕರಣಗೊಳಿಸಿ ಪೂಜಾ ವಿಧಿವಿಧಾನ ಧಾರ್ಮಿಕ ಕಾರ್ಯನಡೆಯಲಿವೆ ಎಂದು ಅಲ್ಲಿನ ಅರ್ಚಕರು ತಿಳಿಸಿದ್ದಾರೆ.
ಅಲ್ಲದೇ ಆಂಜನೇಯ ಸ್ವಾಮಿ ನೀರೋಕುಳಿ ಹಬ್ಬವು ಇದೇ ಸಂದರ್ಭದಲ್ಲಿರುವ ಕಾರಣ ಈ ಬಾರಿ ಗ್ರಹಣ ನಿಮಿತ್ಯ ಪಲ್ಲಕ್ಕಿ ಉತ್ಸವ, ಗಂಗಾಸ್ನಾನ ಪೂಜಾ ವಿಧಿವಿಧಾನಗಳಲ್ಲಿ ಒಂದಿಷ್ಟು ಸಮಯ ಏರುಪೇರಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿವರ್ಷ ಎಳ್ಳಾಮವಾಸ್ಯೆ ಮುನ್ನಾ ದಿನದಂದು ಆಂಜನೇಯ ಸ್ವಾಮಿ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯನ್ನು ಭಕ್ತಾಧಿಗಳು ಸುರಪುರ ತಾಲೂಕಿನ ಯಮನೂರ ಹತ್ತಿರದ ಕೃಷ್ಣಾನದಿಗೆ ಗಂಗಾಸ್ನಾನಕ್ಕಾಗಿ ತೆರಳಿ ಇಂದು ಬೆಳಗ್ಗೆ ಆಗಮಿಸಿ ಪಲ್ಲಕ್ಕಿ ಉತ್ಸವ ನಡೆಯುತಿತ್ತು. ಈ ಬಾರಿ ಒಂದಿಷ್ಟು ಸಮಯ ತಡವಾಗಬಹುದು ಎಂದು ಅರ್ಚಕರು ತಿಳಿಸಿದ್ದಾರೆ.