ಬ್ಲಾಕ್ ಮೇಲ್ ಆರೋಪಿ ಪೊಲೀಸ್ ಪೇದೆ ಅಮಾನತ್ತು – ಎಸ್ಪಿ ಶಶಿಕುಮಾರ್ ಆದೇಶ!
ಕಲಬುರಗಿ: ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಹೋಗಿದ್ದನ್ನೇ ನೆಪವಾಗಿಟ್ಟುಕೊಂಡು ಜೇವರಗಿ ಪಟ್ಟಣದ ರಮೇಶ ತಳವಾರ್ ಎಂಬ ಯುವಕನಿಗೆ ಪೇದೆ ಮಲ್ಲು ಬಾಸಗಿ ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಪರಿಣಾಮ ಕಿರುಕುಳ ತಾಳದೆ ರಮೇಶ ತಳವಾರ್ ನೇಣಿಗೆ ಶರಣಾಗಿದ್ದಾನೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ. ಅಂತೆಯೇ ಪೇದೆ ಮಲ್ಲು ಬಾಸಗಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಮೃತನ ಸಂಬಂಧಿಕರು ಆಗ್ರಹಿಸಿದ್ದಾರೆ. ಜೇವರಗಿ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗಾಗಿ, ಎಸ್ಪಿ ಶಶಿಕುಮಾರ್ ಅವರು ಜೇವರಗಿಗೆ ಭೇಟಿ ನೀಡಿದ್ದಾರೆ. ಜೇವರಗಿ ಠಾಣೆಯ ಪೊಲೀಸ್ ಪೇದೆ ಮಲ್ಲು ಬಾಸಗಿಯನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ. ಅಂತೆಯೇ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಹೀಗಾಗಿ, ಪರಿಸ್ಥಿತಿ ನಿಯಂತ್ರಣಗೊಂಡಿದೆ. ಪೊಲೀಸ್ ಪೇದೆ ಮಲ್ಲು ಬಾಸಗಿಯನ್ನು ಕೂಡಲೇ ಬಂಧಿಸುವಂತೆ ಮೃತನ ಸಂಬಂಧಿಕರು ಆಗ್ರಹಿಸಿದ್ದಾರೆ. ಅಲ್ಲದೆ ಇಂಥ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.