ಸ್ವಕುಳ ಸಾಳಿ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ
ನೂತನ ಅಧ್ಯಕ್ಷರಾಗಿ ರಾಜು ಚಿಲ್ಲಾಳ ಪದಗ್ರಹಣ
ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ
ಯಾದಗಿರಿ, ಶಹಾಪುರಃ ಸ್ವಕುಳ ಸಾಳಿ ಸಮಾಜ ಸಂಘ ಶಹಾಪುರ (ರಿ) ಸಂಘಕ್ಕೆ ಈಚೆಗೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರಿಸಿದ ಪೂರ್ವ ನಿಯೋಜಿತ ಸಂಘದ ಕಾರ್ಯದರ್ಶಿ ಜನಾರ್ಧನ ಮಾನು ಮಾತನಾಡಿ, ಸಂಘದ ಜವಬ್ದಾರಿಯನ್ನುವಹಿಸಿಕೊಂಡ ನೂತನ ಪದಾಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಸಂಘ ಮುನ್ನಡೆಸುವಾಗ ಹಲವಾರ ಅಡೆತಡೆಗಳು ಬರುವದು ಸಹಜ ಎಲ್ಲವನ್ನು ನಿಭಾಯಿಸಿಕೊಂಡು ಸಮಾಜದ ಏಳ್ಗೆಗೆ ಶ್ರಮಿಸಬೇಕು.
ಈ ಹಿಂದಿನ ಸಂಘದಲ್ಲಿ ಹಲವಾರು ಘಟನೆಗಳನ್ನು ಸಮಾಜದ ಎಲ್ಲರೂ ಕಂಡಿದ್ದಾರೆ. ಅವೆಲ್ಲವನ್ನು ಸಹಿಸಿಕೊಂಡು ಜಯಿಸಿಕೊಂಡು ಸಂಘವನ್ನು ಇಲ್ಲಿವರೆಗೂ ಮುನ್ನಡೆಸಿಕೊಂಡು ಬರಲಾಗಿದೆ. ಇದಕ್ಕೆ ಎಲ್ಲರ ಸಹಕಾರವೇ ಕಾರಣ.
ಕೆಲವೊಂದು ಸಮಸ್ಯೆಗಳು ಬಂದಿರುವದು ತಮಗೆಲ್ಲ ಗೊತ್ತಿದೆ.
ಅವೆಲ್ಲವನ್ನು ಪರಿಹರಿಸಿಕೊಂಡು ಸತ್ಯಕ್ಕೆ ಜಯವಿದೆ ಎಂಬುದನ್ನು ಅರಿತು. ಎಲ್ಲರನ್ನು ಒಳಗೊಂಡು ಹಿರಿಯರು ಕಿರಿಯರು ಎಲ್ಲರನ್ನು ಸಮತಟ್ಟಾಗಿ ತೆಗೆದುಕೊಂಡು ಹೋಗುವುದು ನೂತನ ಪದಾಧಿಕಾರಿಗಳ ಜವಬ್ದಾರಿಯಾಗಿದೆ.
ಸಮಾಜದ ಒಳಿತಿಗಾಗಿ ನಾವೆಲ್ಲ ಹಿರಿಯರು ನಿಮ್ಮ ಜೊತೆ ಇರುತ್ತೇವೆ. ಸಮಾಜದ ಉನ್ನತಿಕರಣಕ್ಕೆ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.

ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಯುವ ಮುಖಂಡ ರಾಜಕುಮಾರ ಚಿಲ್ಲಾಳ ಮಾತನಾಡಿ, ತಾವೆಲ್ಲರೂ ಸೇರಿ ಒಮ್ಮತದಿಂದ ನಮ್ಮ ಮೇಲೆ ವಿಶ್ವಾಸವಿಟ್ಟು ಅತಿ ದೊಡ್ಡ ಜವಬ್ದಾರಿಯನ್ನು ವಹಿಸಿದ್ದೀರಿ. ತಮಗೆಲ್ಲ ಕೃತಜ್ಞತೆಗಳನ್ನು ಸಲ್ಲಿಸುತ್ತಾ, ಸಮಾಜದ ಹಾಗು ಹೋಗುಗಳನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಸಮಾಜದ ಅಭಿವೃದ್ಧಿಗೆ ನಿರಂತರ ಶ್ರಮವಹಿಸುತ್ತೇನೆ.
ಸಮಾಜದ ಅಭ್ಯುದಯಕ್ಕೆ ಹಲವಾರು ನೂತನ ಪದಾಧಿಕಾರಿ ತಂಡ ಹೊಸ ಕನಸುಗಳನ್ನು ಕಟ್ಟಿಕೊಂಡಿದ್ದೇವೆ. ಆ ನಿಟ್ಟಿನಲ್ಲಿ ಹಿರಿಯರ ಮಾರ್ಗದರ್ಶನದೊಂದಿಗೆ ಸಂಘದ ಹೆಸರಿಗೆ ಎಲ್ಲೂ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ರಾಜು ಚಿಲ್ಲಾಳ, ಉಪಾಧ್ಯಕ್ಷ ಸಂತೋಷಕುಮಾರ ಶಿರವಾಳ, ಕಾರ್ಯದರ್ಶಿ ನಾಗೇಂದ್ರ ದಂಡು, ಸಹ ಕಾರ್ಯದರ್ಶಿ ಶುಕರಾಜ ಜುಜಾರೆ, ಖಜಾಂಚಿ ರಾಜಶೇಖರ ಮೋಳ್ಕರ್ ಸೇರಿದಂತೆ ಸದಸ್ಯರಾಗಿ ಆಯ್ಕೆಗೊಂಡ ಸಂತೋಷ ಟೊಣಪೆ, ಬಸವರಾಜ ದಿವಟೆ, ಕೃಷ್ಣಾ ಚಿಲ್ಲಾಳ, ಸುನೀಲ್ ಮಾನು, ವಿಜಯಕುಮಾರ ಶಿರವಾಳ, ರಾಮಕೃಷ್ಣ ಚಿಲ್ಲಾಳ, ಮಲ್ಲಯ್ಯ ಚಿಲ್ಲಾಳ, ಮಾರುತಿ ದಂಡು, ಕೊಟ್ರೆಪ್ಪ ಧನವಾಡ, ರಾಮಕೃಷ್ಣ ಮಿರ್ಜಿ, ಮಂಜುಳಾ ಕೆಂಧೂಳೆ, ಲಕ್ಷ್ಮೀ ಫಿರಂಗಿ, ಭೀಮಣ್ಣ ಮಿರ್ಜಿ, ಕಿರಣಕುಮಾರ ದಂಡು, ಸೂರ್ಯಕಾಂತ ಮಿರ್ಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಮಲ್ಲಯ್ಯ ಸಾಹು ಫಿರಂಗಿ, ಮಲ್ಲಿಕಾರ್ಜುನ ಚಿಲ್ಲಾಳ, ಯುವ ಮುಖಂಡ ಸತೀಶ ಮಿರ್ಜಿ ಇತರರು ಉಪಸ್ಥಿತರಿದ್ದರು. ಕಳೆದ ಮೇ.11 ರಂದು ಸಂಘದ 20 ಸ್ಥಾನಗಳಿಗೂ ತಲಾ ಒಬ್ಬರಂತೆ ನಾಮಪತ್ರ ಸ್ಪರ್ಧೆಯಲ್ಲಿ ಉಳಿದಿದ್ದರಿಂದ, ಮೇ.12 ರಂದು ಅವಿರೋಧ ಆಯ್ಕೆ ಪಟ್ಟಿಯನ್ನು ಚುನಾವಣೆ ಅಧಿಕಾರಿಗಳು ಘೋಷಿಸಿ, ಪ್ರಕಟಿಸಿದ್ದರು.
ರವಿವಾರ ಜು.7 ರಂದು ಸಂಘದ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು. ಸಮಾಜದ ಮಹಿಳೆಯರು, ಹಿರಿಯರು ಕಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸಿದ್ದರು.