ಸ್ವಾತಿ” ಮಳೆಯ ಬಗ್ಗೆ ನಿಮಗೆಷ್ಟು ಗೊತ್ತು..? ಸ್ವಾತಿ ಮಳೆ ನೀರಿನಿಂದ ಹಾಲಿಗೆ ಹೆಪ್ಪು ಹಾಕಬಹುದೆ.? ಏನಿದರ ಮಹತ್ವ.!
ಸ್ವಾತಿ ನಕ್ಷತ್ರದ ಮಳೆ ನೀರು ಮತ್ತು ಬಿಸಿಲಿನ ಮಹತ್ವ ಏನು.? ಗೊತ್ತಾದರೆ ನೀವು ಸದುಪಯೋಗ ಪಡಿಯುವಿರಿ
“ಸ್ವಾತಿ” ಮಳೆಯ ಬಗ್ಗೆ ನಿಮಗೆಷ್ಟು ಗೊತ್ತು..? ಸ್ವಾತಿ ಮಳೆ ನೀರಿನಿಂದ ಹಾಲಿಗೆ ಹೆಪ್ಪು ಹಾಕಬಹುದೆ.? ಏನಿದರ ಮಹತ್ವ.!
ಸ್ವಾತಿ ನಕ್ಷತ್ರದ ಮಳೆ ನೀರು ಮತ್ತು ಬಿಸಿಲಿನ ಮಹತ್ವ ಏನು.? ಗೊತ್ತಾದರೆ ನೀವು ಸದುಪಯೋಗ ಪಡಿಯುವಿರಿ
ವಿವಿ ಡೆಸ್ಕ್ಃ “ಸ್ವಾತಿ” ಮುತ್ತಿನ ಮಳೆ ಹನಿಯೇ ಮೆಲ್ಲ ಮೆಲ್ಲನೆ ಧರೆಗಿಳಿಯೇ ಎಂದು ಖ್ಯಾತ ಗಾಯಕ ದಿ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು “ಬಣ್ಣದ ಗೆಜ್ಜೆ” ಚಲನ ಚಿತ್ರದಲ್ಲಿ ಅವರ ಕಂಠದಿಂದ ಅದ್ಭುತವಾಗಿ ಹೊರ ಬಂದಿರುವದು ನಾವೆಲ್ಲ ಕೇಳಿದ್ದೇವೆ.
ಆದರೆ ಅದೇ ಸ್ವಾತಿ ಮಳೆ ನೀರು ಮತ್ತು ಸ್ವಾತಿ ನಕ್ಷತ್ರದ ಬಿಸಿಲು ಎಷ್ಟು ಮಹತ್ವಿದೆ ಅದರಲ್ಲಿ ಆರೋಗ್ಯ ರಕ್ಷಣೆಯ ಗುಣಗಳಿವೆ ಎಂಬುದು ವಿಜ್ಞಾನಿಗಳು ಸೇರಿದಂತೆ ಆಯುರ್ವೇದ ತಜ್ಞರು, ಹಿರಿಯ ಸಾಂಪ್ರದಾಯಿಕ ಜೀವಿಗಳು ಇಂದಿಗೂ ಸ್ವಾತಿ ಮಳೆ, ಬಿಸಿಲನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಹೌದು ಸ್ವಾತಿ ಮಳೆ ಇದೇ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದಲ್ಲಿ ಈ ಮಳೆ ಬರಲಿದೆ. ಅಂದರೆ ಅ.23 ರಿಂದ ನ.6 ನೇ ತಾರೀಖಿನೊಳಗೆ ಈ ಸ್ವಾತಿ ಮಳೆ ಬರಲಿದೆ. ಸ್ವಾತಿ ಮಳೆ ಮಳೆಗಾಲದ ಕೊನೆ ಮಳೆಯಾಗಿರಲಿದೆ.
ಈ ಮಳೆ ಪ್ರಸ್ತುತ ಚಂಡಮಾರುತದ ಅಲೆಗೆ ಒಳಪಟ್ಟು ಸುರ್ರನೆ ಬೆಕಾಬಿಟ್ಟಿಯಾಗಿ ಬಂದರೆ ಅದು ಉಪಯೋಗಕ್ಕೆ ಬಾರದು. ಈ ಸ್ವಾತಿ ಮಳೆ ಅಂದರೆ ಮೊದಲಿಗೆ ಹೇಳಿದಂತೆ ಕನ್ನಡ ಚಲನ ಚಿತ್ರದ ಹಾಡಿನಲ್ಲಿ ಹೇಳಿರುವಂತೆ ಸ್ವಾತಿ ಮುತ್ತಿನಮಳೆ ಹನಿಯು ಮೆಲ್ಲ ಮೆಲ್ಲನೆ ಧರೆಗಿಳಿಯಬೇಕು ಇತರಹ ಮಳೆಯ ನೀರನ್ನು ನೇರವಾಗಿ ಆಕಾಶದಿಂದ ಮಣ್ಣಿನ ಪಾತ್ರೆಯಲ್ಲಿ ಅಥವಾ ಗಾಜಿನ ಪಾತ್ರೆಯಲ್ಲಿ ಹಿಡಿದು ಸರಿಯಾದ ಮುಚ್ಚಳಿಕೆಯಿಂದ ಹಿಡಿದಟ್ಟುಕೊಂಡು ಬಳಸಬಹುದು.
ಇಂತಹ ಸ್ವಾತಿ ಮಳೆಯ ನೀರನ್ನು ಹಾಲಿಗೆ ಹೆಪ್ಹು ಹಾಕಬಹುದು ಅದರಿಂದ ಔಷಧಿಯುಕ್ತ ಮೊಸರು ಸೇವಿಸಲು ಅನುಕೂಲವಾಗಲಿದೆ. ಅಲ್ಲದೆ ಚರ್ಮ ರೋಗಕ್ಕೆ, ತುರಿಕೆ ಇದ್ದರೆ, ಅಥವಾ ಕಣ್ಣಿನ ಚಿಕಿತ್ಸೆಗೆ ಶೇಖರಿಸಿಟ್ಟ ಸ್ವಾತಿ ಮಳೆ ನೀರ ಹನಿ ಹಾಕಿಕೊಂಡರೆ ಕಣ್ಣು ತೆಜಸ್ಸುರೂಪ ಪಡೆಯಲಿದೆ. ಕಣ್ಣಿನ ರೋಗಗಳು ವಾಸಿಯಾಗಲಿವೆ.
ಸ್ವಾತಿ ನಕ್ಷತ್ರ ಸಮಯದಿ ಬೀಳುವ ಬಿಸಿಲು ಸಹ ಉತ್ತಮವಾಗಿದೆ. ಈ ಬಿಸಿಲಿನಡಿ ರೇಷ್ಮೇ ಸೀರೆಗಳು ಒಣಗಿಸಿ ಇಟ್ಟರೆ ಸೀರೆ ಯಾವುದೇ ಹುಳ ಉಪ್ಪಡಿ ಇಡಿಯುವದಿಲ್ಲ. ತೊಡಲು ಸುರಕ್ಷತೆಯಾಗಿರಲಿದೆ.
ಅಲ್ಲದೆ ಪುಸ್ತಕಗಳು ಸಹ ಸ್ವಾತಿ ನಕ್ಷತ್ರದ ಬಿಸಿಲಿನಲ್ಲಿ ಒಣಗಿಸಬಹುದು. ಇಂತಹ ಬಿಸಿಲಿನಡಿ ಒಣಗಿಸಿದ ಪುಸ್ತಕಗಳಿಗೆ ಯಾವುದೇ ಕ್ರಿಮಿಕೀಟ ತಟ್ಟುವದಿಲ್ಲ. ಹೀಗಾಗಿ ಹಿರಿಯರು ಇದು ಸಾಂಪ್ರಾಯಿಕ ಪದ್ಧತಿಯಾಗಿ ರೂಢಿಸಿಕೊಂಡು ಬಂದಿದ್ದಾರೆ. ಪ್ರಸ್ತುತ ತಜ್ಞರು ಇದನ್ನು ಶೋಧಿಸಿ ಮಾನದಂಡಗಳನ್ನು ಅನುಸರಿಸಿಯೇ ಸ್ವಾತಿ ಮಳೆ ನೀರು ಔಷಧಿಯುಕ್ತವಾಗಿವೆ ಅದರಲ್ಲಿ ಹಲವು ರೋಗಗಳನ್ನು ಗುಣಪಡಿಸುವ ಅದ್ಭುತ ಶಕ್ತಿ ಇದೆ ಎಂದು ತಿಳಿಸಿದ್ದಾರೆ.
ಹೀಗಾಗಿ ಸ್ವಾತಿ ಮಳೆ ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿ ಹೊಂದಿದೆ ಎನ್ನಬಹುದು. ಹೀಗಾಗಿ ಇಂದೇನಾದರೂ ಸ್ವಾತಿ ಮಳೆ ಸಮರ್ಪಕವಾಗಿ ಬಂದರೆ ನೀರು ಶೇಖರಿಸಿಕೊಳ್ಳುವದು ಮರೆಯಬೇಡಿ. ತಲೆ ನೋವು,ಜ್ವರ, ಚರ್ಮ ತುರಿಕೆ ಸಮಸ್ಯೆ, ಅಷ್ಟೇ ಏಕೆ ಕ್ಯಾನ್ಸರ್ ಇತರೆ ಸಮಸ್ಯೆಗಳಿಗೆ ರಾಮ ಬಾಣವಾಗಿದೆ. ಹೀಗಾಗಿ ಎಲ್ಲರೂ ಸ್ವಾತಿ ಮಳೆ ನೀರು ಸಂಗ್ರಹಿಸಿಕೊಳ್ಳಿ ಈ ನಕ್ಷತ್ರ ಬಿಸಿಲು ಸಹ ಬಳಸಿಕೊಳ್ಳಬಹುದಿ ಏನಂತೀರ್ರಿ…?
– ಡಾ.ಆನಂದಕುಮಾರ ಬಿ.ಕೆ.
– ಮಲ್ಲಿಕಾರ್ಜುನ ಮುದ್ನೂರ