ಪ್ರಮುಖ ಸುದ್ದಿ
ಸಾಲಬಾಧೆ ರೈತ ಆತ್ಮಹತ್ಯೆ
ಯಾದಗಿರಿಃ ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ನಡೆದಿದೆ.
ಬಾಬು ತಂದೆ ಅಮಲಪ್ಪ ಜೇಗಿರಿ [36] ಎಂಬಾತನೇ ಸಾಲಬಾಧೆಗೆ ಹೆದರಿ ಮನೆಯಲ್ಲಿಯೇ ಶುಕ್ರವಾರ ಬೆಳಗಿನಜಾವ (ಕ್ರಿಮಿನಾಶಕ ಔಷಧಿ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಈತ ತನ್ನ ಎರಡು ಎಕರೆ ಜಮೀನಿನಲ್ಲಿ ಹತ್ತಿ ಬಿತ್ತನೆ ಮಾಡಿಕೊಂಡಿದ್ದ ಎನ್ನಲಾಗಿದೆ. ಕಳೆದ ಬಾರಿ ಬೆಳೆ ನಷ್ಟ ಅನುಭವಿಸಿದ್ದು, ಮೈತುಂಬಾ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.
ಸಮೀಪದ ಸಗರ ಎಸ್‍ಬಿಐ ಬ್ಯಾಂಕಿನಲ್ಲಿ 50 ಸಾವಿರ ಸಾಲ ಮತ್ತು ಸ್ಥಳೀಯ ಗ್ರಾಮದ ವಿಎಸ್‍ಎಸ್‍ಎನ್ ಬ್ಯಾಂಕಿನಲ್ಲಿ 30 ಸಾವಿರ ರೂ. ಸೇರಿದಂತೆ ಕೈಸಾಲ 5 ಲಕ್ಷ 80 ಸಾವಿರ ಸೇರಿ ಒಟ್ಟು ಸಾಲ 6 ಲಕ್ಷ 60 ಸಾವಿರ ಸಾಲವಿತ್ತೆಂದು ತಿಳಿದು ಬಂದಿದೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.