ಪ್ರಮುಖ ಸುದ್ದಿ

ಅಮಾವಾಸ್ಯೆ ದಿನ ಹಠಾತ್ತನೆ ಬಾಯ್ತೆರೆದ ಭೂಮಿ..! ಅಧಿಕಾರಿಗಳಿಂದ ಪರಿಶೀಲನೆ

ದರಿಯಾಪುರದಲ್ಲಿ ಇಳಿದ ಧರೆ, ಹಠಾತ್ತನೆ ಬಿದ್ದ ತಗ್ಗು

ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ದರಿಯಾಪುರ ಸಮೀಪದ ನಾಗನಟಗಿ ರಸ್ತೆ ಮಾರ್ಗದ ಜಮೀನೊಂದರಲ್ಲಿ ಹಠಾತ್ತನೆ ಭೂಮಿ ಬಾಯ್ತೆರೆದು, ಬಾವಿಯಂತ ತಗ್ಗು ಬಿದ್ದಿದೆ. ನಾಗರಿಕರು ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಲ್ಲದೆ, ಗಾಬರಿಗೊಂಡು ತಂಡೋಪ ತಂಡವಾಗಿ ಬಂದು ವೀಕ್ಷಿಸುತ್ತಿರುವ ಘಟನೆ ಅಮಾವಾಸ್ಯೆ ದಿನವಾದ ಬುಧವಾರ ನಡೆದಿದೆ.

ಸೋಪಣ್ಣ ತಂದೆ ದೇವಿಂದ್ರಪ್ಪ ದರಿಯಾಪುರ ಎಂಬುವರ ಜಮೀನಿನಲ್ಲಿ ಬಾಯ್ತೆರೆದ ಭೂಮಿ ಎಲ್ಲರಲ್ಲೂ ಗಾಬರಿ ಮೂಡಿಸಿದೆ.

ಅಂದಾಜು ನಾಲ್ಕು ಅಡಿ ಅಗಲ 10 ರಿಂದ 12 ಅಡಿ ಆಳ ತಗ್ಗು ಬಿದ್ದಿದ್ದು, ಒಳಗಡೆ ಮಣ್ಣು ಗಟ್ಟಿಯಾಗಿಯೇ ಕಾಣುತ್ತಿದೆ. ಒಳಗಡೆ ನೀರು ಬಂದಿಲ್ಲ. ಒಳಭೂಮಿ ಗಟ್ಟಿಯಾಗಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.ಗ್ರಾಮೀಣ ರೈತಾಪಿ ಜನಗಳ ಪ್ರಕಾರ, ಒಳಗಡೆ ದೊಡ್ಡ ಸುರಂಗ ಕಂಡು ಬರುತ್ತಿದೆ ಎನ್ನುತ್ತಿದ್ದು, ಅಲ್ಲದೆ ನಿಧಿ ತೆಗೆದುಕೊಂಡು ಹೋಗಿರುವ ಶಂಕೆಯನ್ನು ಹಲವರಿಂದ ವ್ಯಕ್ತವಾಗುತ್ತಿದೆ.

ಅಮಾವಾಸ್ಯೆ ಬೇರೆ ಇರುವದರಿಂದ ವಿವಿಧ ಕಾರಣ ಆತಂಕಗಳು ಹುಟ್ಟಿಕೊಳ್ಳುತ್ತಿವೆ. ಮುಗ್ಧ ರೈತಾಪಿ ಜನರಿಂದ ಹಲವು ಕಾರಣಗಳು ಕೇಳಿ ಬರುತ್ತಿದ್ದು, ಊಹಾಪೋಹ ಹುಟ್ಟಿಕೊಳ್ಳುವದಕ್ಕಿಂತ ಮುಂಚಿತವಾಗಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಸತ್ಯಾಸತ್ಯತೆಯ ಬಯಲಿಗೆ ಎಳೆಯಬೇಕಿದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.

ಸ್ಥಳೀಯರು ತಹಸೀಲ್ದಾರ ಗಮನಕ್ಕೆ ತರಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಲು ತೆರಳಿದ್ದಾರೆ. ಅವರ ಪರಿಶೀಲನೆ ನಂತರವೇ ಈ ಘಟನೆ ಕುರಿತು ತಿಳಿಯಬಹುದಾಗಿದೆ. ಗ್ರಾಮಸ್ಥರು ನಿಧಿ ಆಸೆಗೆ ತಗ್ಗು ತೋಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳಿಂದ ಪರಿಶೀಲನೆ..

ಉಪ ತಹಸೀಲ್ದಾರ ವೆಂಕಣ್ಣಗೌಡ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಯ್ತೆರದ ಭೂಮಿಯೊಳಗೆ ಏಣಿ ಇಡಲಾಗಿದ್ದು ಒಳಗಡೆ ಮನುಷ್ಯರು ಇಳಿದು ಪರಿಶೀಲನೆ ನಡೆಸಲು ಯತ್ನಿಸಿ ವಿಫಲವಾಗಿದೆ. ಏಣಿ ಒಳಗಡೆಯ ಜಾರಿತು ಎನ್ನಲಾಗಿದೆ. ಈಗ ಅಧಿಕಾರಿಗಳು ಜೆಸಿಬಿ ಯಂತ್ರ ತರಿಸಲು ಕಳುಹಿಸಿದ್ದು, ಅದರಿಂದ ತಗ್ಗು ಅಗಲಗೊಳಿಸಿ ಆಳದಲ್ಲಿ ಏನಿದೆ ೀ ತಗ್ಗು ಕೃತಕ ಸೃಷ್ಟಿನಾ ಅಥವಾ ನೈಸರ್ಗಿಕವಾಗಿ ಬಿದ್ದಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ ಎಂದು ಇದೀಗ ಸ್ಥಳದಲ್ಲಿದ್ದ ವಿನಯವಾಣಿ ವರದಿಗಾರ ಮಂಜುನಾಥ ಬಿರಾದಾರ ತಿಳಿಸಿದ್ದಾರೆ.

——————————–

Related Articles

Leave a Reply

Your email address will not be published. Required fields are marked *

Back to top button