ಪ್ರಮುಖ ಸುದ್ದಿ
ಹಾಸ್ಯ ನಟ ಬುಲೆಟ್ ಪ್ರಕಾಶ ವಿಧಿವಶ
ನಟ ಬುಲೆಟ್ ಪ್ರಕಾಶ ವಿಧಿವಶ
ಬೆಂಗಳೂರಃ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಹಾಸ್ಯನಟ ಬುಲೆಟ್ ಪ್ರಕಾಶ (44) ವಿಧಿವಶರಾದರು.
ಕನ್ನಡ ಚಲನಚಿತ್ರ ರಂಗದ ಹಾಸ್ಯ ದಿಗ್ಗಜ ಬುಲೆಟ್ ಪ್ರಕಾಶ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಅವರು ಸುಮಾರು 325 ಕ್ಕೂ ಹೆಚ್ವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಆದರೆ ಕಳೆದ ವಾರಗಳಿಂದ ಅವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂಧನೆ ನೀಡದೆ ಅವರು ಮೃತಪಟ್ಟಿದ್ದಾರೆ.
ಪ್ರಕಾಶಗೆ ಪತ್ನಿ ಸೇರಿದಂತೆ ಒಂದು ಹೆಣ್ಣು, ಒಂದು ಗಂಡು ಮಗುವಿದ್ದು, ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಹೆಸರಾಂತ ನಟರು, ಅವರ ಸಹೋದ್ಯೊಗಿ ನಟರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.