ದನಗಾಹಿ ಮಕ್ಕಳು ಮತ್ತು ಪೋರ್ನ್ ವಿಡಿಯೋದ ಪರಿಣಾಮವೂ…
ದನಗಾಯಿ ಹುಡುಗನ ಇಂಟರ್ನಟ್ ಬಳಕೆ..!
ಲೈಂಗಿಕ ಸ್ವೇಚ್ಚೆಯನ್ನು ನಾವು ಮೊಬೈಲ್ ಮತ್ತು ಇಂಟರ್ನೆಟ್ ಮುಖಾಂತರ ಪಾಶ್ಚಿಮಾತ್ಯ ದೇಶಗಳಿಂದ “ಆಮದು”ಮಾಡಿಕೊಂಡೇವು; ಮಡಿವಂತಿಕೆಯ ಅಡಿಯಲ್ಲಿ ಭಯ ಭಕ್ತಿಯಿಂದ ಕತ್ತಲಿನಲ್ಲಿ ಗುಪ್ತವಾಗಿ ನಡೆಯುತ್ತಿದ್ದ, ಅಷ್ಟೇನು ಪ್ರಾಮುಖ್ಯತೆ ನೀಡದ ರಾತ್ರಿಯ ಒಂದು ಕ್ರೀಡೆ, ಸಂತಾನೋತ್ಪತ್ತಿಯ ಕ್ರಿಯೆ ಎನ್ನುವ ದಿವ್ಯ ಭಾವದಿಂದ ದಂಪತಿಗಳಿಬ್ಬರು ತುಂಬಾ ಗೌರವದಿಂದ ನಡೆಸುವ “ಕ್ರೀಡೆ”ಸಾರ್ವಜನಿಕವಾಗಿ ಹೀನಾತಿ ಹೀನವಾಗಿ ದೇವರು ಮೆಚ್ಚದ ಕ್ರಿಯೆಯಾಗಿ, ಹೇಸಿಗೆಯಾಗಿ ಹೋಯಿತು.ನಿಜ,ಕಾಮ ಜೀವನದ ಅವಿಭಾಜ್ಯ ಅಂಗವೆ.ಅದರ ಸ್ವರೂಪ ಮಾತ್ರ ಹೀನವಾಯಿತು!
ಸಂತೋಷದ ವಿಷಯವೇ!ಅಷ್ಟು ಮಾತ್ರ ಲೈಂಗಿಕ ಸ್ವಾತಂತ್ರ್ಯ ನಮ್ಮ ಜನಕ್ಕೆ ದೊರಕಿತು.ಈ ಮೊಬೈಲ್‌ನಿಂದ ಬಂದ “ಜ್ಞಾನ” ವ್ಯಾಪಕವಾಗಿ ಎಲ್ಲಿಯವರೆಗೆ ತಲುಪಿದೆ ಎಂದರೆ ಕುರಿ ಕಾಯುವ ಇನ್ನೂ ಮೀಸೆ ಚಿಗುರದ ಮಕ್ಕಳವರೆಗೆ ತಲುಪಿದ್ದು ಆತಂಕಕಾರಿ ವಿಷಯವಾಗಿದೆ.ಮೂರು ನಾಲ್ಕು ಸಾವಿರಕ್ಕೆ ಒಂದು 4g ಮೊಬೈಲ್ ದೊರೆಯುವ ಈ ಕಾಲದಲ್ಲಿ ತೀರ ದನಗಾಹಿ ಮಕ್ಕಳವರೆಗೆ ಸ್ಕ್ರೀನ್ ಟಚ್ ಮೊಬೈಲ್ ತಲುಪಿರುವುದರಲ್ಲಿ ಏನೂ ಆಶ್ಚರ್ಯವಿಲ್ಲ.ಆದರೆ ಗೂಗಲ್ ತನ್ನ ಸರ್ಚ್ ಎಂಜಿನ್‌ಅನ್ನು ಎಷ್ಟೊಂದು ಸುಲಭವಾಗಿಸಿದೆ ಎಂದರೆ ಗೂಗಲ್ ಪೇಜ್‌ನ ಮೈಕ್ ಚಿಹ್ನೆಯನ್ನು ಟಚ್ ಮಾಡಿ “ಸೆಕ್ಸ್ ವಿಡಿಯೋಸ್” ಎಂದರೆ ಸಾಕು;ಜಗತ್ತಿನ ಎಲ್ಲಾ ಸೆಕ್ಸ್ ಪಾರ್ನ ವಿಡಿಯೋ ಸೈಟುಗಳು ಪರಧೆಯ ಮೇಲೆ ಪ್ರದರ್ಶಿಸಲ್ಪಡುತ್ತವೆ!ಇದಕ್ಕೆ ಇಂಗ್ಲಿಷ್ ಬೇಕಿಲ್ಲ, ಮತ್ತು ಯಾವುದೇ ವಿದ್ಯೆ ಮತ್ತು ವಿದ್ಯಾರ್ಹತೆ ಬೇಕಿಲ್ಲ. ಆಮೇಲೇನಿದೆ? ಭಯಾನಕ ರಾಸಲೀಲೆಯ ಚಿತ್ರಗಳು!
ಈ ಮಧ್ಯೆ ಅಂಬಾನಿ ಮಾಹಾರಾಜನ ಉಚಿತ ನೆಟ್ಟು!!!
ಇದನ್ನೆಲ್ಲಾ ಏಕೆ ಹೇಳಲು ಪ್ರಾರಂಭಿಸಿದೆನೆಂದರೆ ಮೊನ್ನೆ ನಮ್ಮೂರ ಪಕ್ಕದಲ್ಲಿರುವ ಹಳ್ಳಿಯೊಂದರ ಕುಡಿಯುವ ನೀರಿನ ಸರಬರಾಜು ಯಂತ್ರದ ದುರಸ್ತಿಗೆ ಹೋಗಿದ್ದೆ.ದಟ್ಟಡವಿಯಲ್ಲಿರುವ ಆ ಪಂಪ್ ಹೌಸಿಗೆ ನಾನೊಬ್ಬನೆ ಹೋಗಿದ್ದೆ.ಮಳೆ ಬಂದಿತ್ತಲ್ಲ? ಬೈಕ್ ಬಳಸದೆ ಕಾಲು ನಡಿಗೆಯಲ್ಲಿ ಅಲ್ಲಿಗೆ ಹೋಗಬೇಕಾಯಿತು.ಯಂತ್ರವನ್ನು ಆಪರೇಟಿಂಗ್ ಮಾಡುವ ಮನುಷ್ಯ ಇನ್ನೂ ಬಂದಿರಲಿಲ್ಲ. ಆ ಪಂಪ್ ಹೌಸ್ ಆಚೆ ಆಡುಗಳು ಮೇಯುತ್ತಿದ್ದವು.ಮತ್ತು ಸಣ್ಣದಾಗಿ ಮಾತುಗಳು ಕೇಳಿ ಬಂದವು.ಕುತೂಹಲದಿಂದ ನನ್ನ ಕಿವಿಗಳನ್ನು ನಿಮಿರಿಸಿ ಆ ಶಬ್ದದ ಕಡೆಗೆ ಏಕಾಗ್ರಗೊಳಿಸಿದೆ.ಆ ಮಾತುಗಳು ಇಂತಿದ್ದವು:
“ಅಲ್ಲಲೆ ಅದೇನಲೆ ಹಂಗ್ ನೆಕ್ಕುತ್ತಾರೆ!”ಅಂತ ಒಂದು ಹುಡುಗ ಹೇಳುತ್ತಿದ್ದ!
“ಮತ್ತೆ ಹಂಗಲೆ,ನಾಯಿ,ಕೋಣ,ಹೋರಿ,ಆಡು ಹಂಗೇ ನೆಕ್ಕೋಂತ ಮಾಡೋದು,ಮತ್ತೆ ಮನುಷ್ಯರು ಹಂಗೆ ಮಾಡ್ತಾರೆ!!”ಅಂತ ಇನ್ನೊಬ್ಬ ಹುಡುಗ ಅನ್ನುತ್ತಿದ್ದ.
“ಛೀ!!!”ಅಂತ ಮೊದಲಿನ ಹುಡುಗ ಹೇಳುತ್ತಿರುವಂತೆ ನಾನು:
“ಲೇಲೇಲೇ, ಏನ್ ಮಾಡಾಕತ್ತೀರಲೆ!” ಎಂದೇ. ಕೈಯೊಳಗಿನ ಮೊಬೈಲ್ ಅನ್ನು ಬಚ್ಚಿಟ್ಟುಕೊಂಡು ಮಕ್ಕಳು ಓಡಿ ಹೋದವು.ಇಲ್ಲೊಂದು ವಿಷಯ ಗಮನದಲ್ಲಿರಲಿ:ಪಾರ್ನ್ ವಿಡಿಯೋ ನೋಡುತ್ತಾ ಇವತ್ತಿನ ಸಂದರ್ಭಕ್ಕೆ ಐತಿಹಾಸಿಕ ಬ್ರಹ್ಮಚಾರಿಗಳು ಬದುಕಿದ್ದರೂ ಮನಸ್ಸನ್ನು ನಿಯಂತ್ರಿಸಿಕೊಳ್ಳಲಾರರು!ಹಸ್ತ ಮೈಥುನ ಅಥವಾ ವಿಕೃತ ಕಾಮಗಳಾದ ನೈಸರ್ಗಿಕ ವಿರುದ್ಧದ ಕ್ರಿಯೆಗೆ ತೊಡಗುವುದರಲ್ಲಿ ಆಶ್ಚರ್ಯವಿಲ್ಲ.ಲೈಂಗಿಕ ಸಂಬಂಧೀ ಅಪರಾಧ ಪ್ರಕರಣಗಳು ಹೆಚ್ಚಾಗುವಿಕೆಗೆ ಈ ಪಾರ್ನ್ ವಿಡಿಯೋ ಕಾರಣವಾಗಿದೆ ಎನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಇದು ದನಗಾಹಿ ಹುಡುಗರ ಪ್ರಶ್ನೆ ಮಾತ್ರವಲ್ಲ.ಸುಸಂಸ್ಕೃತ ಮತ್ತು ವಿದ್ಯಾವಂತ ಯುವ ಸಮೂಹ ಕೂಡಾ ಹೀಗೆ ಪೋರ್ನ್ ವಿಡಿಯೋದ ಹಿಂದೆ ಬಿದ್ದಿದೆ.ಇಂತಹ ಸಂದರ್ಭದಲ್ಲಿ ಮನೋನಿಗ್ರಹ ಎನ್ನುವುದು ಅಸಾಧ್ಯದ ಮಾತು.ಇದು ಎಲ್ಲಿಯವರೆಗೆ ವ್ಯಕ್ತಿಯ ಮನಸ್ಸನ್ನು ಕೊಂಡೊಯ್ಯುತ್ತದೆ ಎಂದರೆ ವ್ಯಕ್ತಿಯ ಅಥವಾ ಹುಡುಗನ ಒಳಗೊಳಗೇ ವಿಕೃತ ಕಾಮ ಮೊಳಕೆ ಒಡೆಯುತ್ತದೆ.ಮುಖ ಮೈಥುನ ಗುದ ಮೈಥುನದಂತಹ ಹೇಸಿಗೆ ಚಟುವಟಿಕೆಗಳು ಜರುಗಲ್ಪಡುತ್ತವೆ.ಏನೇ ಸಂಭವಿಸಿದರು ಎರಡು ಮನಸ್ಸುಗಳ ಒಪ್ಪಂದದ ಕ್ರಿಯೆಯಾಗಿರುವುದರಿಂದ ಮೂರನೆ ವ್ಯಕ್ತಿ ಏನೂ ಮಾಡುವಂತೆ ಹೇಳುವಂತೆ ಇಲ್ಲವಾದರೂ ನಶಿಸಿ ಹೋಗುತ್ತಿರುವ ನೈತಿಕ ಮೌಲ್ಯಗಳ ಕುರಿತು ಪ್ರಜ್ಞಾವಂತ ಜನ ಯೋಚಿಸಬೇಕಿದೆ.
ಧಾರ್ಮಿಕ ಚಟುವಟಿಕೆಗಳ ಮುಖಾಂತರ ನಮ್ಮ ಪೂರ್ವಿಕರು ಮನೋನಿಗ್ರಹದ ಲಗಾಮನ್ನು ಪರೋಕ್ಷವಾಗಿ ಹಾಕುತ್ತಿದ್ದರು.ದೈವದ ಕಡೆಗಿನ ಭಕ್ತಿ,ಪಾಪ ಭೀತಿ ವ್ಯಕ್ತಿಯ ಮನಸ್ಸನ್ನು ನಿಗ್ರಹಿಸುತ್ತಿತ್ತು.ಅತಿರೇಕ ಎನ್ನುವಂತಹ ಕೃತ್ಯಗಳ ಕುರಿತು ಬಲವಾದ ಭಯವಿತ್ತು.ಮನಸ್ಸು ಹೀನ ಕೃತ್ಯ ಮಾಡಲು ಹಿಂಜರಿಯುತ್ತಿತ್ತು.ವಾತ್ಸಾಯನ ಮುನಿ ಕೂಡಾ ತಮ್ಮ ಕಾಮಶಾಸ್ತ್ರದಲ್ಲಿ ವಿಕೃತ ಕಾಮದ ಕುರಿತು ಎಲ್ಲೂ ಉಲ್ಲೇಖಿಸಿಲ್ಲ.ಎರಡು ದೇಹಗಳ ಮಧ್ಯೆ ಸಂಭವಿಸುವ ಕ್ರೀಡೆ ಆರೋಗ್ಯಕರವಾಗಿ ಮನೋರಂಜನಾ ಕ್ರಯೆಯಾಗಿ ನಡೆಯಬೇಕು ಎನ್ನುವುದು ಋಷಿಯ ಉದ್ಧೇಶವಾಗಿರಬೇಕು.ಅದಕ್ಕೆಂದೆ ಮುನಿಗಳು ಭಂಗಿಗಳ ಬಗ್ಗೆ ಬರೆದರೆ ಹೊರತು ಹೇಸಿಗೆಯ ಬಗ್ಗೆ ಬರೆದಿಲ್ಲ.
ಸರಿ ಒಪ್ಪೋಣ,ಮುಖ ಮೈಥುನ ಮತ್ತು ಇನ್ನೊಂದು ವಿಕೃತ ಕ್ರಿಯೆಯಿಂದ ಇಬ್ಬರು ವ್ಯಕ್ತಿಗಳಿಗೆ ಲೈಂಗಿಕ ಆನಂದ ದೊರೆಯುತ್ತಿದೆ ಎನ್ನುವುದಾದರೆ ಮಾಡಿಕೊಳ್ಳಲಿ.ಆದರೆ ಪೋರ್ನ್ ವಿಡಿಯೋದಲ್ಲಿನ ನಟರ ಹಾಗೆ ಬಾಥ್ ಟಬ್‌ನಲ್ಲಿ ಸ್ನಾನ ಮಾಡಿ ಅಂಗಾಂಗಗಳನ್ನು ಶುದ್ದವಾಗಿ ಇಟ್ಟುಕೊಂಡಿರುತ್ತಾರೆಯೇ?ಒಂದು ವಿಷಯ ಹೇಳಬೇಕೆಂದರೆ ಹಳ್ಳಿಗಳಲ್ಲಿ ಇನ್ನೂ ಒಂದು ಗೌರವಾನ್ವಿತ ಸ್ನಾನ ಗೃಹ ಕೂಡಾ ಬರುವುದಿಲ್ಲ. ಲಂಗ ಬಿಚ್ಚದೆ ಲುಂಗಿ ಬಿಚ್ಚದೆ ನಡೆಸುವ ಸ್ನಾನದಿಂದ ಅಂಗಾಂಗಗಳು ಶುದ್ದವಾಗಿ ಇರುವುದಾದರೂ ಹೇಗೆ?ಇವೆಲ್ಲವೂ ಬಿಟ್ಟು ಹಾಕೋಣ…
ದನಗಾಹಿ ಮಕ್ಕಳವರೆಗೆ ಈ ನೆಕ್ಕುವ ವಿಷಯ ಮತ್ತು ಮಕ್ಕಳವರೆಗೆ ಲೈಂಗಿಕ ಭಾವ ಹರಿದು ಬಂದಿದ್ದು ತಂತ್ರಜ್ಞಾನದ ಭಯಾನಕ ಪರಿಣಾಮ ಎನ್ನುವುದು ಯಾರೇ ಆಗಲಿ ಒಪ್ಪುವ ಮತ್ತು ಭಯಪಡುವ ವಿಷಯವೆ!!!
–ಲಕ್ಷ್ಮೀಕಾಂತ ನಾಯಕ , ಲೇಖಕರು