ನಮ್ಮ ಅಭ್ಯರ್ಥಿಯನ್ನ ಮುದಿ ಎತ್ತು ಎನ್ನಲಿ, ನಾವು ಸಿಎಂ ಅವರನ್ನು ಹಾಗೇ ಕರೆಯುವದಿಲ್ಲ – ಡಿಕೆಶಿ ಲೇವಡಿ
ನಮ್ಮ ಅಭ್ಯರ್ಥಿಯನ್ನ ಮುದಿ ಎತ್ತು ಎನ್ನಲಿ, ನಾವು ಸಿಎಂ ಅವರನ್ನು ಹಾಗೇ ಕರೆಯುವದಿಲ್ಲ – ಡಿಕೆಶಿ ಲೇವಡಿ
ತುಮಕೂರಃ ಬಿಜೆಪಿ ಪ್ರಮುಖ ನಾಯಕರು ನಮ್ಮ ಅಭ್ಯರ್ಥಿ ಜಯಚಂದ್ರ ಅವರನ್ನು ಮುದಿ ಎತ್ತು ಎಂದು ಜರಿಯಲಿ ಆದರೆ ನಾವು ಸಿಎಂ ಅವರನ್ನು ಹಾಗೇ ಕರೆಯುವದಿಲ್ಲ. ಅವರ ವಯಸ್ಸನ್ನು ನಾವು ಗೌರವಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಲೇವಡಿ ಮಾಡಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಬಿಜೆಪಿ ನಾಯಕರ ಟೀಕೆಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು,
ನಮ್ಮ ಅಭ್ಯರ್ಥಿ ಅವರನ್ನು ಬಿಜೆಪಿ ಮುದಿ ಎತ್ತು ಎಂದು ಕರೆದರೆ, ನಮ್ಮ ರಾಜ್ಯದ ಸಿಎಂರನ್ನು ಏನೆನ್ನಬೇಕು. ಆದರೆ ಆ ಬಗ್ಗೆ ನಾವು ಮಾತನಾಡುವದಿಲ್ಲ ಎಂದಿದ್ದಾರೆ.
ಜಯಚಂದ್ರ ಅವರಿಗೆ ಈಗ 71 ವರ್ಷ, ಮೊನ್ನೆ ಮೊನ್ನೆ ಇದೇ ಜಯಚಂದ್ರ ಅವರ ಬಳಿ ಬಿಜೆಪಿ ತಮ್ಮ ಮಂತ್ರಿಗಳನ್ನು ಕಳುಹಿಸಿ ಜಯಚಂದ್ರ ಅವರ ಬಳಿ ತರಬೇತಿಗೆ ಕಳುಹಿಸಿದ್ದರು. ಜಯಚಂದ್ರ ಅವರುಂದ ಪಾಠ ಕೇಳಿಸಿಕೊಂಡವರೇ ಇಂದು ಅವರನ್ನು ಮುದಿ ಎತ್ತು ಅಂದರೆ ಹೇಗೆ ಮುಂದೊಂದು ದಿನ ತಾವೂ ಆಗಲೇಬೇಕು. ನಮ್ಮ ತಂದೆಯವರಿಗೆ ಆದ ವಯಸ್ಸು ಅವರಿಗಾಗಿದೆ ಎಂದರು.