ಜಿಲ್ಲಾದ್ಯಂತ ಧಾರಕಾರ ಮಳೆಃ ಹಲವು ಗ್ರಾಮಗಳ ಸಂಪರ್ಕ ಕಡಿತ, ಸೇತುವೆ ಮುಳುಗಡೆ
ಜಿಲ್ಲಾದ್ಯಂತ ಧಾರಕಾರ ಮಳೆಃ ಹಲವು ಗ್ರಾಮಗಳ ಸಂಪರ್ಕ ಕಡಿತ, ಸೇತುವೆ ಮುಳುಗಡೆ
ಯಾದಗಿರಿಃ ಯಾದಗಿರಿ ಸೇರಿದಂತೆ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.
ಶಹಾಪುರ ತಾಲೂಕಿನ ಹೊಸೂರ, ಶಿರವಾಳ, ಸಲಾದಪುರ ಹಳ್ಳಗಳು ತಬಿ ಹರಿಯುತ್ತಿದ್ದು, ಸಲಾದಪುರ ಗ್ರಾಮ ಹಳ್ಳದ ಸೇತುವೆ ಮೇಲೆ ನೀರು ಹರಿಯುತ್ತಿರುವ ಪರಿಣಾಮ ಸಂಚಾರ ಸ್ಥಗಿತಗೊಂಡಿದೆ.
ಅದರಂತೆ ಬಹುತೇಕ ಗ್ರಾಮಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ಹಲವಡೆ ಜಮೀನಿಗೆ ನೀರು ನುಗ್ಗಿರುವ ಕಾರಣ ಹತ್ತಿ, ತೊಗರೆ ಬೆಳೆಗಳು ನೀರಲ್ಲಿ ಮುಳುಗಿ ರೈತರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ.
ಯಾದಗಿರಿಯಲ್ಲೂ ಗ್ರಾಮೀಣ ಭಾಗದಲ್ಲಿ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣ ಬೆಳೆಹಾನಿ ಉಂಟಾಗಿದೆ. ಸುರಪುರ ತಾಲೂಕಿನಲ್ಲಿಯೂ ಜಿಟಿಜಿಟಿ ಮಳೆ ಮುಂದುವರೆದಿದ್ದು, ಬೆಳೆಗಳ ಹಾನಿ ಉಂಟಾಗಿದೆ.
ಹತ್ತಿ ಬೆಳೆ ಉತ್ತಮವಾಗಿ ಫಸಲು ಬಂದಿದೆ ಎನ್ನುತ್ತಿರುವಾಗಲೇ ಮಳೆ ಅವಾಂತರ ಸೃಷ್ಟಿಸಿ ಹತ್ತಿ,ತೊಹರೆ ಬೆಳೆಗಳು ನೀರಲ್ಲಿ ಮುಳುಗಿ ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ವರುಣದೇವನ ಅವಾಂತರಕ್ಕೆ ರೈತರು ಕಂಗಾಲಾಗಿದ್ದಾರೆ ಎನ್ನಬಹುದು.