ಸಂಭ್ರಮದ ಗೋಪಾಲಸ್ವಾಮಿ ಜಾತ್ರೆ, ರೋಮಾಂಚನಗೊಳಿಸಿದ ಹಾಲೋಕಳಿ ಕಂಬ ಏರಾಟ
ಸಂಭ್ರಮದಿಂದ ಜರುಗಿದ ಹಾಲೋಕಳಿ ಜಾತ್ರೆ
ಯಾದಗಿರಿ, ಸುರಪುರ: ಜಿಲ್ಲೆಯ ಸುರಪುರ ನಗರದಲ್ಲಿ ಐತಿಹಾಸಿಕ ಹಿನ್ನಲೆಯುಳ್ಳ ಪ್ರಸಿದ್ದ ವೇಣುಗೋಪಾಲ ಸ್ವಾಮಿಯ ಹಾಲೋಕಳಿ ಜಾತ್ರೆ ಅಂಗವಾಗಿ ಮಂಗಳವಾರ ಸಂಜೆ 6 ಗಂಟೆಗೆ ದೇವರ ಸ್ತ್ತಂಭಾರೋಹಣ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಜರುಗಿತು.
ಜಾತ್ರಾ ಅಂಗವಾಗಿ ವೇಣುಗೋಪಾಲ ಸ್ವಾಮಿಗೆ ವಿವಿಧ ಪುಷ್ಪದಿಂದ ಅಲಂಕರಿಸಲಾಗಿತ್ತು. ಬೆಳ್ಳಿಗ್ಗೆ 5:30ಕ್ಕೆ ಸುಪ್ರಭಾತ, ಪಂಚಾಮೃತ , ಅಭಿಷೇಕ ಮಹಾಮಂಗಳಾರತಿಯೊಂದಿಗೆ ವಿಶೇಷ ಪ್ರಜೆ ನೇರವೆರಿಸಲಾಯಿತು.
ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸ್ತಂಭಾರೋಹಣ ನೋಡಲು ಮತ್ತು ದೇವರ ದರ್ಶನ ಪಡೆಯಲು ಮಧ್ಯಾಹ್ನದಿಂದ ದೇವಸ್ಥಾನದತ್ತ ತಂಡೋಪ ತಂಡವಾಗಿ ಆಗಮಿಸಿದರು. ಸಂಜೆ 6 ಗಂಟೆಗೆ ದೇವಸ್ಥಾನದ ಮೇಲುಗಡೆಯ ಮೂಲೆಯೊಂದರ ಕಟ್ಟೆಯ ಮೇಲೆ ಕುಳಿತ ಅರಸು ಮನೆತನದ ವತನದಾರರು ನಾಣ್ಯಗಳನ್ನು ಕೆಳಕ್ಕೆ ಚಿಮ್ಮಿಸುವುದರ ಮೂಲಕ ಸ್ತಂಭಾರೋಹಣಕ್ಕೆ ಚಾಲನೆ ನೀಡಿದರು.
ವೇಣುಗೋಪಾಲ ದೇವಸ್ಥಾನದ ಆವರಣದಲ್ಲಿ ಹಾಕಲಾಗಿರುವ ಐದು, ಐವತ್ತು ಅಡಿ ಎತ್ತರದ ದೇವರ ಕಂಬಗಳನ್ನು ಏರುವುದು ವಿಶೇಷ ಕಂಬಗಳ ಮಂಟಪದಲ್ಲಿ ಕುಳಿತ ವ್ಯಕ್ತಿ ಏರುತಿರುವರ ಮೇಲೆ ಒಳ್ಳೆಣ್ಣಿ, ಬಾಳೆಹಣ್ಣಿನ ರಸ, ಮೇಲಿಂದ ಮೇಲೆ ಹಾಕುತ್ತಿದ್ದರೆ ಕೆಳಗಿನಿಂದ ಜನರು ಪಿಚುಕಾರಿಯಿಂದ ನೀರು ಚಿಮ್ಮಿಸುವರು ಇದರಿಂದ ಕಂಬ ಏರುವದು ಸುಲಭವಲ್ಲ, ಆದಾಗ್ಯು ಕಂಬ ಏರಲು ಭಕ್ತ ಪಟುಗಳು ಕಂಬವನ್ನು ಹಿಡಿದು ಮೇಲಕ್ಕೇರುತ್ತಲೆ ಇರುವರು.
ನೀರು ಒಳ್ಳೆಣ್ನಿ ಎರಚುತ್ತಿರುವದರಿಂದ ಪದೆ ಪದೇ ಜಾರಿ ಕೆಳಗೆ ಬೀಳುತ್ತಿದ್ದರೆ, ಸ್ಥಳದಲ್ಲಿ ಸೇರಿದ್ದ ಭಕ್ತ ಸಮೂಹವು ಕೆಕೆ, ಸಿಳ್ಳೆ, ಚಪ್ಪಾಳೆ ಹರ್ಷೊದ್ಘಾರ ಮುಗಿಲು ಮುಟ್ಟಿರುತ್ತದೆ. ದೇವರ ಕಂಬಗಳನ್ನು ಏರಿ ಅದರ ಮೇಲೆ ಕಟ್ಟಿರುವ ಮೊಸರು ಗಡಗೆಯನ್ನು ಹೊಡೆಯುವ ಸ್ಪರ್ಧೆ ಇದಾಗಿದ್ದು, ಕೊನೆಗೂ ಭಕ್ತ ಪಟುಗಳು ಕಂಬವನ್ನು ಏರಿ ಮೊಸರು ಗಡಗೆಯನ್ನು ಹೊಡೆಯುತ್ತಾರೆ. ಆಗ ನೆರೆದ ಭಕ್ತರ ಹರ್ಷದ್ಘೋರ ದೇವರ ಹೆಸರಲ್ಲಿ ಓಂಕಾರ ಗೋವಿಂದ ಗೋವಿಂದ ನಾಮಸ್ಮರಣೆ ಜೋರಾಗಿ ಕೇಳಿ ಬರುತ್ತದೆ.