ಯಾದಗಿರಿಃ ವೈದ್ಯರ ಮುಷ್ಕರದ ಬಿಸಿಗೆ ಮೂವರ ಬಲಿ
ಶಹಾಪುರಃ ಕೆಂಭಾವಿಯಲ್ಲಿ ಬಾಣಂತಿ ಸಾವು
ಯಾದಗಿರಿಃ ಎದೆ ನೋವು ಮತ್ತು ಲೋ-ಬಿಪಿಯಿಂದ ನರಳುತ್ತಿದ್ದ ಜಿಲ್ಲೆಯ ಶಹಾಪುರ ತಾಲೂಕಿನ ಕಾಡಂಗೇರ ಗ್ರಾಮ ನಿವಾಸಿ ಬಿಬಿ ಬೇಗಂ (50) ಖಾಸಗಿ ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮೃತಪಟ್ಟ ಘಟನೆ ಹಿಂದೆಯೇ, ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಓರ್ವ ಬಾಣಂತಿ ಮಹಿಳೆ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟ ವರದಿಯಾಗಿದೆ.
ಕೆಂಭಾವಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಾಣಂತಿ ಹಬೀಬಾ ಬೇಗಂ ತೆರಳುವಾಗ ಸಾವನ್ನಪ್ಪಿದ ಘಟನೆ ಜರುಗಿದೆ.
ಅದೇ ರೀತಿ ಯಾದಗಿರಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ರಾಂಉ ಎಂಬುವರು ಸಹ ತೀವ್ರ ಜ್ವರದಿಂದ ಬಳಲಿ ಸಾವನ್ನಪ್ಪಿದ್ದಾರೆ ಎಂಬ ವರದಿ ಬಂದಿದೆ.
ಹೀಗಾಗಿ ಒಟ್ಟು ಯಾದಗಿರಿ ಜಿಲ್ಲೆಯಲ್ಲಿ ಗಮನಕ್ಕೆ ಬಂದ ಸಾವಿನ ಸಂಖ್ಯೆ 3 ಆಗಿದ್ದು, ಸಮರ್ಪಕ ಮಹಿತಿ ದೊರೆಯದ ಅದೆಷ್ಟು ಜನರು ಬಲಿಯಾಗಿದ್ದಾರೆ ಎಂಬುದು ಪತ್ತೆ ಮಾಡಬೇಕಿದೆ. ವೈದ್ಯರ ಮುಷ್ಕರದ ಬಿಸಿ ಜಿಲ್ಲೆಯಾದ್ಯಂತ ತಟ್ಟಿದ್ದು, ನಾಗರಿಕರು ಚಿಕಿತ್ಸೆಗಾಗಿ ಪರದಾಡುವಂತಾಗಿದೆ.
ಸುದ್ದಿಯ ಮುಖಪುಟದಲ್ಲಿರುವ ಚಿತ್ರ ಚಿಕಿತ್ಸೆ ದೊರೆಯದ ಕಾರಣ ಮೃತಪಟ್ಟ ಬಾಣಂತಿ ಹಬೀಬಾ ಬೇಗಂಳದ್ದಾಗಿದೆ.