ಪ್ರಮುಖ ಸುದ್ದಿ
ಮಹಿಳೆಯ ಬಾಯಿಗೆ ಬಟ್ಟೆ ತುಂಬಿ ಹತ್ಯೆ!
ಕಲಬುರಗಿ : ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಜಮೀನಿನಲ್ಲಿ ಶುಕರಾಬಿ (55)ಎಂಬ ಮಹಿಳೆಯ ಬಾಯಿಗರ ಬಟ್ಟೆ ತುಂಬಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ಜಮೀನಿಗೆ ಹೋದ ಮಹಿಳೆ ರಾತ್ರಿಯಾದರೂ ಮರಳಿ ಮನೆಗೆ ಬಾರದಿದ್ದಾಗ ಸಂಬಂಧಿಕರು ಹುಡುಕಾಟ ಆರಂಭಿಸಿದ್ದಾರೆ. ಆದರೆ, ರಾತ್ರಿ 11 ಗಂಟೆ ಸುಮಾರಿಗೆ ಜಮೀನಿನಲ್ಲಿ ಶುಕರಾಬಿ ಶವ ಪತ್ತೆ ಆಗಿದೆ.
ಶುಕರಾಬಿ ಕೊಲೆ ಪ್ರಕರಣ ಇಡೀ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಯಾವ ಕಾರಣಕ್ಕೆ ಮತ್ತು ಯಾರು ಹತ್ಯೆ ಮಾಡಿದ್ದಾರೆ ಎಂಬುದು ಈವರೆಗೆ ತಿಳಿದು ಬಂದಿಲ್ಲ.
ಮಾಡಬೂಳ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.