ಪಿಎಂ ಕಿಸಾನ್ ಯೋಜನೆ: 18 ಕಂತಿನ ಹಣ ಯಾವಾಗ ರಿಲೀಸ್? ಇಲ್ಲಿದೆ ಸಂಪೂರ್ಣ ಮಾಹಿತಿ

(pm -kisan) ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಹಲವು ಯೋಜನೆಗಳ ಲಾಭವನ್ನು ರೈತರು ಪಡೆಯುತ್ತಿದ್ದಾರೆ. ಇದೀಗ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈವರೆಗೆ 17 ಕಂತುಗಳನ್ನು ಬಿಡುಗಡೆ ಮಾಡಲಾಗಿದ್ದು, ಈಗ 18 ನೇ ಕಂತನ್ನು ಬಿಡುಗಡೆಗಾಗಿ ರೈತರು ಕಾಯುತ್ತಿದ್ದಾರೆ. ಆದರೆ 18 ನೇ ಕಂತಿನ ಹಣ ಜಮಾ ಆಗಬೇಕಿದ್ದರೆ ರೈತರು ತಪ್ಪದೆ ಈ ಕೆಲಸವನ್ನು ಪೂರ್ಣಗೊಳಿಸಿರಬೇಕು. ಇಲ್ಲವಾದಲ್ಲಿ ನಿಮಗೆ 18 ಕಂತಿನ ಹಣ ಜಮಾ ಆಗುವುದಿಲ್ಲ. ಹಾಗಾದರೆ ಏನದು ಕೆಲಸ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡಬೇಕು:
* ಯೋಜನೆಗೆ ಇನ್ನೂ ನೊಂದಾವಣಿ ಆಗಿಲ್ಲದೇ ಇರಬಹುದು.
* ಇಕೆವೈಸಿ ಆಗಿಲ್ಲದೇ ಇರಬಹುದು, ಅಥವಾ ಸರಿಯಾಗಿ ಮಾಡಿಲ್ಲದೇ ಇರಬಹುದು.
* ಯೋಜನೆಯ ಅರ್ಹತಾ ಮಾನದಂಡ ಒದಗಿಸಲು ವಿಫಲವಾಗಿರಬಹುದು.
ನೀವು ಪಿಎಂ ಕಿಸಾನ್ ಯೋಜನೆಯೊಂದಿಗೆ ಸಂಬಂಧ ಹೊಂದಿದ್ದರೆ ಮತ್ತು ಕಂತಿನ ಲಾಭವನ್ನು ಪಡೆಯಲು ಬಯಸಿದರೆ, ನೀವು ಇ-ಕೆವೈಸಿ ಮಾಡಿಸಿಕೊಳ್ಳುವುದು ಮುಖ್ಯ. ನೀವು ಇದನ್ನು ಮಾಡದಿದ್ದರೆ, ನಿಮಗೆ ಈ ಯೋಜನೆಯ ಹಣ ಬರುವುದಿಲ್ಲ.
ಎಲ್ಲಿ ಇ-ಕೆವೈಸಿ ಮಾಡಿಸಬೇಕು:
ನಿಮ್ಮ ಹತ್ತಿರದ ಸಿಎಸ್ಸಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಯೋಜನೆಯ ಅಧಿಕೃತ ಪೋರ್ಟಲ್ pmkisan.gov.in ನಿಂದ ನೀವು ಇ-ಕೆವೈಸಿ ಮಾಡಬಹುದು. ಯೋಜನೆಗೆ ಸಂಬಂಧಿಸಿದ ರೈತರಿಗೆ ಭೂ ಪರಿಶೀಲನೆಯೂ ಕಡ್ಡಾಯವಾಗಿದೆ. ನೀವು ಈ ಕೆಲಸವನ್ನು ಮಾಡದಿದ್ದರೆ, ನೀವು ಕಂತಿನ ಪ್ರಯೋಜನದಿಂದ ವಂಚಿತರಾಗಬಹುದು.
ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್ ಗೆ ಹೋಗಿ (https://pmkisan.gov.in). ಅಲ್ಲಿ ಮುಖಪುಟ ಆರಂಭದಲ್ಲಿ ಒಂದು ಪಾಪ್ ಅಪ್ ಬರುತ್ತದೆ. ಅದರಲ್ಲಿ ಇಕೆವೈಸಿ, ನಿಮ್ಮ ಸ್ಟೇಟಸ್ ತಿಳಿಯಲು ಹಾಗೂ ಪಿಎಂ ಕಿಸಾನ್ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಲು ಕ್ಯೂ ಆರ್ ಕೋಡ್ ಗಳು ಕಾಣುತ್ತವೆ. ನಿಮಗೆ ಅಗತ್ಯವಿದ್ದಲ್ಲಿ ಅದನ್ನು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು.
ಹಾಗೆಯೇ, ಪಾಪ್ ಅಪ್ ಮುಚ್ಚಿ, ಪಿಎಂ ಕಿಸಾನ್ ವೆಬ್ ಸೈಟ್ ನ ಮುಖಪುಟದಲ್ಲಿ ಸ್ವಲ್ಪ ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಸೆಕ್ಷನ್ ನಲ್ಲಿ ವಿವಿಧ ಸೇವೆಗಳ ಟ್ಯಾಬ್ ಗಳನ್ನು ನೋಡಬಹುದು. ಅದರಲ್ಲಿ ಇಕೆವೈಸಿ ಮಾಡುವುದು, ಫಲಾನುಭವಿಗಳ ಪಟ್ಟಿ ವೀಕ್ಷಿಸುವುದು, ನೊಂದಣಿ ಸ್ಟೇಟಸ್ ನೋಡುವುದು ಹೀಗೆ ಹಲವು ಆಯ್ಕೆಗಳಿವೆ.
ನಿಮಗೆ ಯಾವುದಾದರೂ ಅನುಮಾನ ಇದ್ದಲ್ಲಿ ಹೆಲ್ಪ್ ಡೆಸ್ಕ್ ಟ್ಯಾಬ್ ಕ್ಲಿಕ್ ಮಾಡಬಹುದು. ಅದರಲ್ಲಿ ನಿಮ್ಮ ನೊಂದಣಿ ನಂಬರ್ ಮೂಲಕ ನಿಮ್ಮ ದೂರು ಅಥವಾ ಅನುಮಾನವನ್ನು ವ್ಯಕ್ತಪಡಿಸಬಹುದು. ಅದಕ್ಕೆ ಸೂಕ್ತ ಸಮಜಾಯಿಷಿ ಅಥವಾ ಉತ್ತರ ಅಥವಾ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ.
18ನೇ ಕಂತಿನ ಬಿಡುಗಡೆಯ ದಿನಾಂಕಗಳ ಕುರಿತು ಸರ್ಕಾರ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.