ಧರೆ ಮೇಲೆ ಪಾರ್ವತಿ ಬಿಟ್ಟು ಮಾಯವಾದ ‘ಶಿವ’ ನಿತ್ಯಾನಂದ.!
ಯುವತಿ ಜೊತೆ ಶಿವ ಪಾರ್ವತಿ ಆಟವಾಡಿದ ನಿತ್ಯಾನಂದ
ಬೆಂಗಳೂರಃ ನಿತ್ಯಾನಂದ ಸ್ವಾಮೀಜಿ ಹೆಸರು ಎಲ್ಲರಿಗೂ ಗೊತ್ತಿದೆ. ಆತನ ರಾಸಲೀಲೆ ಪ್ರಕರಣ ಮರೆತು ಹೋದಿತೆ ಎನ್ನುವಷ್ಟರಲ್ಲಿ ನಿತ್ಯಾನಂದ ಒಂದೊಂದೆ ಎಡವಟ್ಟು ಮಾಡಿಕೊಳ್ಳುತ್ತಿದ್ದಾನೆ.
ಗುಜರಾತ್ ಮೂಲದ ಯುವತಿಯರ ನಾಪತ್ತೆ ಪ್ರಕರಣದ ಬೆನ್ನಲ್ಲೆ ರಾಮನಗರ ಜಿಲ್ಲೆಯ ಬಿಡದಿ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ನಿತ್ಯಾನಂದ ಸ್ವಾಮಿ ವಿರುದ್ದ ವಿದೇಶದ ಮಾಜಿ ಭಕ್ತೆಯೊಬ್ಬಳು ಅತ್ಯಾಚಾರ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ ಘಟನೆ ಬೆಳಕಿಗೆ ಇದೀಗ ಬಂದಿದೆ. ಈ ವಿದೇಶಿ ಯುವತಿಯನ್ನು ತಾನು ಸಾಕ್ಷಾತ್ ಶಿವನ ಸ್ವರೂಪಿ ನೀನು ಪಾರ್ವತಿ ಎಂದು ನಂಬಿಸಿ 35 ತಿಂಗಳಿಂದ ಅತ್ಯಾಚಾರ ಎಸಗುತ್ತಾ ಬಂದಿದ್ದಾನೆ ಎಂದು ಇದೀಗ ಸಂತ್ರಸ್ತೆ ಯುವತಿ ನೀಡಿದ ದೂರಿನಿಂದ ತಿಳಿದು ಬಂದಿದೆ.
ಗುಜರಾತ ಮೂಲಕ ಯುವತಿಯರಿಬ್ಬರ ಅಪಹರಿಸಿ ಬೇರಡೆ ಅವರನ್ನು ಸಾಗಿಸಿದ್ದು, ಯುವತಿಯರ ಪಾಲಕರಿಗೂ ಅವರಿಗೂ ಭೇಟಿಯಾಗದಂತೆ ನೋಡಿಕೊಂಡ ನಿತ್ಯಾನಂದ, ನಂತರ ವಿಷಯ ತಿಳಿದ ಪಾಲಕರು ಬಹಿರಂಗವಾಗಿ ನಿತ್ಯಾನಂದ ಮೇಲೆ ಆರೋಪ ಕೇಳುತ್ತಿದ್ದಂತೆ ಆತ ವಿದೇಶಕ್ಕೆ ಹಾರಿದ್ದಾನೆ ಎಂಬ ಸುದ್ದಿ ಬಿತ್ತರವಾಗಿತ್ತು.
ಇದೀಗ ವಿದೇಶ ಮೂಲಕ ಯುವತಿಯನ್ನು ನೀನು ಪಾರ್ವತಿ ನಾನು ಶಿವ ನೃತ್ಯವ ಮಾಡೋಣ ಬಾ ಎಂದು ರಾಸಲೀಲೆ ನಡೆಸಿ ಪ್ರಸಂಗ ಹೊರಬಿದ್ದಿದೆ. ಆದರೆ ಸುದ್ದಿ ಹೊರ ಬರುತ್ತಿದ್ದಂತೆ ಬಿಡದಿಯ ಶಿವ ನಿತ್ಯಾನಂದ ಪಾರ್ವತಿಯನ್ನು ವಿದೇಶದಲ್ಲಿಯೇ ಬಿಟ್ಟು ಎತ್ತ ಹೋಗಿದ್ದಾನೋ ಮಸಣ ಕಾಯಲು ಸಿಗುತ್ತಿಲ್ಲ. ಪೊಲೀಸರು ಈಗ ಬಿಡದಿ ಶಿವನಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.
ಆದರೆ ಈ ಶಿವ ನಿತ್ಯಾನಂದ ಯಾವ ದೇಶದ ರುದ್ರಭೂಮಿಯಲ್ಲಿ ಧ್ಯಾನಾಸಕ್ತನಾಗಿದ್ದಾನೋ ಈತನ ಧ್ಯಾನ ಭಂಗಗೊಳಿಸಲು ಮತ್ಯಾವ ಗಂಗೆಯೇ ಧರೆಗಿಳಿಯಬೇಕೋ ಏನೋ ಎಂಬ ಮಾತುಗಳು ನಾಗರಿಕರ ಬಾಯಿಂದ ವ್ಯಂಗ್ಯವಾಗಿ ಕೇಳಿ ಬರುತ್ತಿವೆ.




