ಪ್ರಮುಖ ಸುದ್ದಿ

ಸಂಸಾರದ ತಾತ್ಪರ್ಯ ತಿಳಿಸಿದ ಸರ್ವಜ್ಞ – ಇಜೇರಿ

ಕವಿ ಸರ್ವಜ್ಞನ ವಚನಗಳು ಸಮಾಜಕ್ಕೆ ಮಾದರಿ – ಡಾ.ಇಜೇರಿ

ಶಹಾಪುರಃ ಸಾಮಾಜಿಕ ಜೀವನದ ಅಂಕುಡೊಂಕುಗಳನ್ನು ತಮ್ಮ ವಚನ ಮತ್ತು ಕಾವ್ಯದ ಮೂಲಕ ತಿದ್ದುವ ಕಾರ್ಯವನ್ನು ಕವಿ ಸರ್ವಜ್ಞರು ಮಾಡಿದ್ದಾರೆ ಎಂದು ಡಾ.ಬಸವರಾಜ ಇಜೇರಿ ತಿಳಿಸಿದರು. ಕವಿ ಸರ್ವಜ್ಞರ ಜಯಂತಿ ಅಂಗವಾಗಿ ತಾಲೂಕು ಆಡಳಿತ ನಗರಸಭೆ ಆವರಣದಲ್ಲಿ ಆಯೋಜಿಸಿದ್ದ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು.

ಸಾಮಾಜಿಕ, ಜೀವನ ಪದ್ಧತಿ, ಶೈಕ್ಷಣಿಕ ಮತ್ತು ಧರ್ಮ ಕುರಿತು ವಚನ, ಕಾವ್ಯ ರಚನೆ ಮೂಲಕ ಜ್ಞಾನದ ಕ್ರಾಂತಿಯನ್ನು ಮೂಡಿಸಿದ ಮಹಾನ್ ತತ್ವಜ್ಞಾನಿ ಸರ್ವಜ್ಞ. ಜನರ ಬದುಕಿನ ವಿಡಂಬಣೆ, ವಾಸ್ತವಿಕ ಸ್ಥಿತಿ ಅರಿತು ಜನರ ಮೇಲೆ ಪರಿಣಾಮ ಬೀರುವಂತ ಕಾವ್ಯ, ಛಂದಸ್ಸು, ತ್ರಿಪದಿ ವಚನಗಳು ಸೇರಿದಂತೆ ಜನರಿಗೆ ತಿಳಿಯುವಂತ ಭಾಷಾ ಜ್ಞಾನದಿಂದ ರಚಿಸಿದ್ದು, ಅದನ್ನು ಓದಿಕೊಂಡವರ ಜೀವನ ಸಫಲತೆಯ ಹಾದಿಯಲ್ಲಿ ಸಾಗಲು ಯಾವುದೇ ಸಂಶಯವಿಲ್ಲ.

ಕಾರಣ ಸಾರ್ವಜನಿಕರು ಕವಿ ಸರ್ವಜ್ಞರ ಬದುಕು ಬರಹ ಕುರಿತು ಅಧ್ಯಯನ ಮಾಡಬೇಕು. ಕವಿ ಸರ್ವಜ್ಞರು ಸಾಂಸರಿಕ ಜೀವನದ ಕೆಲವೊಂದು ಸತ್ಯ ಸಂಗತಿಗಳನ್ನು ತಿಳಿಸಿದ್ದು, ಎಲ್ಲರೂ ಅರ್ಥೈಸಿಕೊಂಡು ನಡೆದಲ್ಲಿ ಬದುಕು ಸುಂದರವಾಗಲಿರಲಿದೆ ಇಲ್ಲವಾದಲ್ಲಿ ನರಕಯಾತನೆ ಅನುಭವಿಸಬೇಕಾದಿತು. ಸರ್ವಜ್ಞರ ವಚನಗಳು ಇಡಿ ಮಾನವ ಸಂಕುಲಕ್ಕೆ ಮಾದರಿಯಾಗಿವೆ ಎಂದು ಬಣ್ಣಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕಾ ತಹಿಶೀಲ್ದಾರ ಜಗನಾಥರಡ್ಡಿ ವಹಿಸಿದ್ದರು. ಮುಖ್ಯಅಥಿತಿಗಳಾಗಿ ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥಮೂರ್ತಿ, ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ, ಸಾಹಿತಿ ಶಿವಣ್ಣ ಇಜೇರಿ, ಮುಖಂಡರಾದ ಸುಧೀರ ಚಿಂಚೋಳಿ, ರಾಜುಗೌಡ ಸಿದ್ರಾಮಪ್ಪ ಕರವಟಿಗಿ, ಅಂಬ್ರಪ್ಪ ಗುಡಗುಂಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನಗರಸಭೆ ಸದಸ್ಯರಾದ ಮಲ್ಲಿಕಾರ್ಜುನ ಗಂಗಾಧರಮಠ, ಅಪ್ಪಣ್ಣ ದಶವಂತ ಮುಖಂಡರಾದ ಗುರು ಕಾಮಾ, ರಾಜುಗೌಡ ಉಕ್ಕಿನಾಳ, ಬಸವರಾಜ ಚೆನ್ನೂರ, ಚಂದ್ರಶೆಖರ ಯಾಳಗಿ, ರವಿಚಂದ್ರ ಎದುರಮನಿ, ನಾಗಪ್ಪ ಗಣಚಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಮುಂಚಿತವಾಗಿ ಸಿಬಿ ಕಮಾನದಿಂದ ನಗರಸಭೆವರೆಗೆ ಕವಿ ಸರ್ವಜ್ಞರ ಭಾವಚಿತ್ರ ಮೆರವಣಿಗೆ ಜರುಗಿತು. ತಹಶೀಲ್ದಾರ ಜಗನ್ನಾಥರಡ್ಡಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದ್ದರು.

Related Articles

Leave a Reply

Your email address will not be published. Required fields are marked *

Back to top button