ಪ್ರಮುಖ ಸುದ್ದಿ

ಸರ್ಕಾರವೇ ಹತ್ತಿ ಖರೀದಿಸಲಿ ಮಾಜಿ ಶಾಸಕ ಶಿರವಾಳ ಮನವಿ

52 ಸಾವಿರ ಹೆಕ್ಟರ್ ಹತ್ತಿ ನಷ್ಟ
ಕಾಟರ ತಾನ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ಹತ್ತಿ ಖರೀದಿಸಲಿ

ಶಹಾಪುರಃ ತಾಲೂಕಾ  ಸೇರಿದಂತೆ ರಾಜ್ಯದಲ್ಲಿ ಹತ್ತಿ ಬೆಳೆಗಾರರು ತೀವ್ರ ಆತಂಕದಲ್ಲಿದ್ದು, ರೈತರು ಬೆಳೆದ ಹತ್ತಿಯನ್ನು ಮನೆಯಲ್ಲಿಯೇ ಕೂಡಿ ಹಾಕಿಕೊಂಡು ಕುಳಿತಿದ್ದಾರೆ. ಸಮರ್ಪಕ ಬೆಂಬಲ ಬೆಲೆಯಿಲ್ಲದೆ ಕಂಗಾಲಾಗಿದ್ದಾರೆ. ಕೊರೊನಾ ವೈರಸ್ ದಾಳಿ ಆತಂಕದಿಂದ ದೇಶ ಲಾಕ್ ಡೌನ್‍ನಡಿ ಮುಳುಗಿದ್ದು, ಹತ್ತಿ ಬೆಲೆ ಕುಸಿಯುವಂತಾಗಿದೆ ಕಾರಣ ಕೇಂದ್ರ ಸರ್ಕಾರ ಹತ್ತಿ ಬೆಳೆ ಖರೀಸುವ ಮೂಲಕ ರೈತಾಪಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮನವಿ ಮಾಡಿದ್ದಾರೆ.

ಲಾಕ್ ಡೌನ್‍ನಿಂದಾಗಿ ಎಲ್ಲಡೆ ಹತ್ತಿ ಮಿಲ್‍ಗಳು ಬಂದ್ ಆಗಿದ್ದು, ಹತ್ತಿ ಬೆಳೆ ಕುಸಿತಗೊಂಡಿದೆ. ಹೀಗಾಗಿ ರೈತರು ಹತ್ತಿಯನ್ನು ಮನೆಯಲ್ಲಿಟ್ಟಿದ್ದು, ಹಾನಿ ಉಂಟಾಗುವ ಸಂಭವಿದೆ.

ಕಾರಣ ಕೇಂದ್ರ ಸರ್ಕಾರ ಕಾಟನ್ ಕಾರ್ಪೂರೇಷನ್ ಆಫ್ ಇಂಡಿಯಾ ಮುಖಾಂತರ ಹತ್ತಿಯನ್ನು ಖರೀದಿಸಬೇಕು. ತಾಲೂಕಿನಲ್ಲಿ ಒಟ್ಟು 52 ಸಾವಿರದ 897 ಹೆಕ್ಟರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಿದ್ದು, ಕೇಂದ್ರ ಸರ್ಕಾರ ಖರೀದಿ ಮಾಡದಿದ್ದಲ್ಲಿ ರೈತರು ಸಾಕಷ್ಟು ನಷ್ಟ ಅನುಭವಿಸುವ ಸಾಧ್ಯತೆ ಇದೆ.
ಈ ಹಿಂದೆ ಕೃಷ್ಣ ಮತ್ತು ಭೀಮಾ ನದಿ ಪ್ರವಾಹದಿಂದಾಗಿ ನದಿ ತಟದಲ್ಲಿರುವ 1907 ಜನ ರೈತರ ಜಮೀನು ಒಟ್ಟು 168.8 ಹೆಕ್ಟರ್ ನಲ್ಲಿ ಬಿತ್ತನೆ ಮಾಡಿದ ಹತ್ತಿ ಬೆಳೆ ಹಾನಿಯಾಗಿದ್ದು, ಇದುವರೆಗೂ ಪರಿಹಾರ ಬಂದಿಲ್ಲ.

ಈ ಕುರಿತು ಕೇಂದ್ರ ಮತ್ತು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿರುವದಾಗಿ ತಿಳಿಸಿದರು. ಅಲ್ಲದೆ ಲಾಕ್ ಡೌನ್ ನಿಂದ ಹೊರಬರಲಾಗದೆ, ಕೆಲವಿಲ್ಲದೆ ಕಷ್ಟದಲ್ಲಿರುವ ಬಡವರಿಗೆ ದುರ್ಬಲರಿಗೆ ರಾಜ್ಯ ಸರ್ಕಾರ ಪಡಿತರ ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲಿದೆ. ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಜೊತೆಗೆ ಈ ಕುರಿತು ಮಾತನಾಡುವೆ ಎಂದರು.

 

ಕೃಷಿ ಉತ್ಮನ್ನ ಮಾರುಕಟ್ಟೆ ಆಶ್ರಯದಲ್ಲಿ ಹತ್ತಿ ಕೊಂಡುಕೊಳ್ಳುವ ಸದುದ್ದೇಶಗಳಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಕಾಟನ್ ಮಿಲ್‍ಗಳ ಆರಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮಿಲ್ ಮಾಲೀಕರು ಕೊರೊನಾ ಆತಂಕದಿಂದ ಮರಳಿ ಮಿಲ್ ಆರಂಭಿಸಲು ಹೆದರುತ್ತಿದ್ದಾರೆ. ಹೀಗಾಗಿ ಹತ್ತಿ ಖರೀದಿಯಲ್ಲಿ ತೊಂದರೆ ಉಂಟಾಗಿದೆ. ಈ ಕುರಿತು ಮೇಲಧಿಕಾರಿಗಳ ಜೊತೆಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು.
-ಕಾರ್ಯದರ್ಶಿಗಳು. ಎಪಿಎಂಸಿ ಶಹಾಪುರ.

Related Articles

Leave a Reply

Your email address will not be published. Required fields are marked *

Back to top button