ಪಶುಸಂಗೋಪನಾ ಇಲಾಖೆ 176 ಖಾಲಿ ಹುದ್ದೆಗೆ ನೇಮಿಸಲು ಸಂಪುಟ ಒಪ್ಪಿಗೆ
ಪಶುಸಂಗೋಪನಾ ಇಲಾಖೆಯಲ್ಲಿನ (ಕಲ್ಯಾಣ ಕರ್ನಾಟಕ ಭಾಗದ) 176 ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ಸಚಿವ ಸಂಪುಟದ ಒಪ್ಪಿಗೆ : ಸಚಿವ ಪ್ರಭು ಚೌವ್ಹಾಣ್
ಬೆಂಗಳೂರು : ಹಲವು ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆನೆಗುದಿಗೆ ಬಿದ್ದಿದ್ದ ಪಶುಸಂಗೋಪನೆ ಇಲಾಖೆಯಲ್ಲಿನ ಹುದ್ದೆಗಳನ್ನು ತುಂಬಿಕೊಳ್ಳಲು ಇಂದು ನಡೆದ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ.
ಖಾಲಿ ಇರುವ ಹುದ್ದೆಗಳ ಬಗ್ಗೆ ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಮುಖ್ಯಮಂತ್ರಿಗಳೊಂದಿಗೆ ಹಲವು ಬಾರಿ ಚರ್ಚಿಸಿದ್ದರು. ಖಾಲಿ ಇರುವ ಹುದ್ದೆಗಳನ್ನು ಶ್ರೀಘ್ರದಲ್ಲಿ ತುಂಬಿಕೊಳ್ಳುಲು ಕ್ರಮ ಕೈಗೊಳ್ಳುದಾಗಿ ಸಿ.ಎಂ ಭರವಸೆ ನೀಡಿದ್ದರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಕೆಲವೆ ತಿಂಗಳಲ್ಲಿ ಹುದ್ದೆಗಳ ಭರ್ತಿಗೆ ಒಪ್ಪಿಗೆ ದೊರಕಿರುವುದು ಅತ್ಯಂತ ಸಂತೋಷ ತಂದಿದೆ ಎಂದು ಸಚಿವ ಪ್ರಭು ಚೌವ್ಹಾಣ್ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸಂವಿಧಾನದ 371(ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಮೀಸಲಾಗಿರುವ 61 ಪಶುವೈದ್ಯ ಹುದ್ದೆಗಳನ್ನು, 32 ಪಶುವೈದ್ಯ ಪರೀಕ್ಷಕರು ಹುದ್ದೆಗಳನ್ನು ಹಾಗೂ 83 ಪಶುವೈದ್ಯಕೀಯ ಸಹಾಯಕ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಮೂಲ ವೃಂದದ ಒಟ್ಟು ವೃಂದದ ಬಲದಲ್ಲಿ 371ಜೆ ಅಡಿಯಲ್ಲಿ ಸ್ಥಳಿಯ ವೃಂದದಲ್ಲಿ ಶೇ 75% ಪ್ರಮಾಣದಲ್ಲಿ ಮೀಸಲಿರಿಸಿದ 61 ಪಶುವೈದ್ಯ ಹುದ್ದೆಗಳನ್ನು, 32 ಪಶುವೈದ್ಯ ಪರೀಕ್ಷಕರು ಹುದ್ದೆಗಳನ್ನು ಹಾಗೂ 83 ಪಶುವೈದ್ಯಕೀಯ ಸಹಾಯಕ ಹುದ್ದೆಗಳ ನೇರ ನೇಮಕಾತಿ ಮೂಲಕ ತುಂಬಿಕೊಳ್ಳಲು ನಿರ್ಧರಿಸಲಾಗಿದೆ.
ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗೆ ಮತ್ತು ಉದ್ಯೋಗ ಸೃಷ್ಠಿಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು. ಅಲ್ಲದೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಭು ಚೌವ್ಹಾಣ್ ಹೇಳಿದರು.